ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಕಿಪಾಕ್ಸ್ ರೋಗದಿಂದ ಮೆದುಳಿನ ಸಮಸ್ಯೆ ಉಂಟಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ. ರೋಗಕ್ಕೆ ತುತ್ತಾದವರಿಗೆ ಭವಿಷ್ಯದಲ್ಲಿ ಮೆದುಳಿನ ಸಮಸ್ಯೆ ಕಾಡಬಹುದು, ಈ ಬಗ್ಗೆ ಸರಿಯಾದ ಅಧ್ಯಯನ ನಡೆಯಬೇಕಿದೆ ಎಂದೂ ಅಧ್ಯಯನ ಸೂಚಿಸಿದೆ.
ಜಗತ್ತನ್ನೇ ಆತಂಕಕ್ಕೆ ತಳ್ಳಿರುವ ಮಂಕಿಪಾಕ್ಸ್ ವೇಗವಾಗಿ ಹರಡುತ್ತಿದ್ದು, ಮುಂದುವರಿದ ದೇಶಗಳೆಂದು ಗುರುತಿಸಿಕೊಂಡಿರುವ ಅಮೆರಿಕ, ಯುರೋಪ್‌ನಲ್ಲೂ ತಲ್ಲಣ ಮೂಡಿಸಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಈ ಸೋಂಕು ಈಗ 80 ದೇಶಗಳಲ್ಲಿ ಬರೋಬ್ಬರಿ 20,000 ಜನರಲ್ಲಿ ಮಂಕಿಪಾಕ್ಸ್ ರೋಗ ಕಾಣಿಸಿಕೊಂಡಿದೆ. ಜಗತ್ತಿನಾದ್ಯಂತ ಮಂಕಿಪಾಕ್ಸ್ ನಾಲ್ಕು ಮಂದಿ ಬಲಿಯಾಗಿದ್ದಾರೆ. ಭಾರತದಲ್ಲಿ ಈವರೆಗೆ ಒಟ್ಟು ಎಂಟು ಮಂದಿಯಲ್ಲಿ ಮಂಕಿಪಾಕ್ಸ್ ಸೋಂಕು ದೃಢಪಟ್ಟಿದ್ದು, ಕೇರಳಲ್ಲಿ ಮಂಕಿಪಾಕ್ಸ್‌ಗೆ ಒಂದು ಜೀವ ಬಲಿಯಾಗಿದೆ.