Friday, December 12, 2025

ದೆಹಲಿ ದಾರಿ ಹಿಡಿತಿದ್ಯಾ ʼನಮ್ಮ ಬೆಂಗಳೂರುʼ? ಗಾಳಿಯ ಗುಣಮಟ್ಟ ತೀವ್ರ ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಮೂರು ದಿನದಿಂದ ಗಾಳಿಯ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡು ಬಂದಿದೆ, ಬೆಂಗಳೂರಿನ ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚಿದೆ.

ಗಾಳಿಯ ಗುಣಮಟ್ಟ ಅನಾರೋಗ್ಯಕರವಾಗಿದ್ದು 180ಕ್ಕೆ ತಲುಪಿದೆ. ಇದರಿಂದ ಇದೀಗ ಜನರು ಆತಂಕ ಪಡುವಂತಾಗಿದೆ. ಬೆಂಗಳೂರಿನ ಗಾಳಿಯಲ್ಲಿ ಉಂಟಾದ ಅಶುದ್ಧತೆಯಿಂದ ಉಸಿರಾಟ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಇದಕ್ಕೆ ಪ್ರಮುಖ ಚಳಿಗಾಲ ಎಂದು ಹೇಳಲಾಗಿದೆ. ಇದರ ಜತೆಗೆ ವಾಹನ ದಟ್ಟಣೆ ಮತ್ತು ನಿರ್ಮಾಣ ಕಾರ್ಯಗಳಿಂದ ಈ ಸ್ಥಿತಿ ಉಂಟಾಗಿದೆ ಎಂದು ಹೇಳಲಾಗಿದೆ.

ಇನ್ನು ಬೆಂಗಳೂರಿನಲ್ಲಿ ಇಂದು ಚಳಿಯ ವಾತಾವರಣವಿದ್ದು, ಇದು ಅನಾರೋಗ್ಯ ಪೀಡಿತರ ಮೇಲೆ ಹಾಗೂ ಯುವಕರು, ಮಕ್ಕಳ ಮೇಲೆ ಹೆಚ್ಚಿನ ಪರಿಣಾಮವನ್ನು ಉಂಟು ಮಾಡಬಹುದು. ಅದಕ್ಕಾಗಿ ಹೆಚ್ಚು ಹೊರಗಡೆ ಹೋಗುವುದನ್ನು ತಪ್ಪಿಸುವುದೇ ಇದಕ್ಕೆ ಉತ್ತಮ ಪರಿಹಾರ ಹಾಗೂ ಬಿಸಿ ತೇವಾಂಶ ಇರುವ ವಸ್ತುಗಳನ್ನು ಬಳಸುವುದು ಉತ್ತಮ ಎಂದು ಹೇಳಲಾಗಿದೆ. ದೆಹಲಿಗಿಂತ ಬೆಂಗಳೂರಿನ ವಾತಾವರಣ ಉತ್ತಮವಾಗಿದ್ದರೂ, ಸೂಚ್ಯಂಕದ ಪ್ರಕಾರ ಇದು ಕಳಪೆ ಗಾಳಿಯಾಗಿರುವ ಕಾರಣ ಎಚ್ಚರ ವಹಿಸುವುದು ಅಗತ್ಯ.

ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ 90-180ಕ್ಕೆ ತಲುಪಿದೆ. ಇದು ಅನಾರೋಗ್ಯಕರ ಸ್ಥಿತಿ ಎಂದು ಹೇಳಲಾಗಿದೆ. PM2.5 (ಸೂಕ್ಷ್ಮ ಕಣಗಳು) ಮತ್ತು PM10 ಪ್ರಮುಖವಾಗಿವೆ, ಜೊತೆಗೆ ಸಾರಜನಕ ಡೈಆಕ್ಸೈಡ್ ಗಾಳಿಯ ಮಟ್ಟವನ್ನು ಕುಗ್ಗಿಸಿದೆ. ವಾಹನಗಳಿಂದ ಹೊರಸೂಸುವ ಹೊಗೆ ಮತ್ತು ನಡೆಯುತ್ತಿರುವ ನಿರ್ಮಾಣ ಕಾರ್ಯಗಳಿಂದ ಗಾಳಿಯ ಗುಣಮಟ್ಟದ ಹದಗೆಡಲು ಕಾರಣ ಎಂದು ಹೇಳಲಾಗಿದೆ.

ಇದರ ಜತೆಗೆ ಚಳಿಗಾಲ ಆಗಿರುವ ಕಾರಣ ಈ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಇದರಿಂದ ಉಸಿರಾಟದ ತೊಂದರೆ ಮತ್ತು ಗಂಟಲಿನ ಕಿರಿಕಿರಿಯನ್ನು ಉಂಟುಮಾಡಬಹುದು, ವಿಶೇಷವಾಗಿ ಯುವಕರು, ವೃದ್ಧರಲ್ಲಿ ಉಸಿರಾಟದ ಸಮಸ್ಯೆ ಕಂಡು ಬರಬಹುದು. ಇನ್ನು ಇಂತಹ ಗಾಳಿಯ ಗುಣಮಟ್ಟದಿಂದ ಯುವಕರ ಮೇಲೆ ಹೆಚ್ಚಿನ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ವರದಿಗಳು ಹೇಳಿದೆ.

error: Content is protected !!