ನಮ್ಮ ಭಾರತ ಅಂದ್ರೆ ಸುಮ್ನೆನಾ? ಯುವ ಪೀಳಿಗೆ ಕೈಯಲ್ಲಿ ʼಆಪರೇಷನ್‌ ಸಿಂದೂರʼ ಟ್ಯಾಟೂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೆಸರಿನಲ್ಲೇ ರೋಮಾಂಚನ ಇರುವ ಆಪರೇಷನ್‌ ಸಿಂದೂರಕ್ಕೆ ಭಾರತೀಯರು ಫಿದಾ ಆಗಿದ್ದಾರೆ. ಪಹಲ್ಗಾಮ್‌ನಲ್ಲಿ ನಮ್ಮ ಹೆಣ್ಣುಮಕ್ಕಳ ಕುಂಕುಮ ಅಳಿಸಿದ್ದ ಉಗ್ರರನ್ನು ಹೊಡೆದುರುಳಿಸಲು ಆಪರೇಷನ್‌ ಸಿಂದೂರ ಆರಂಭವಾಗಿತ್ತು.

ನಮ್ಮ ಸೇನೆ ಪಾಕ್‌ಗೆ ಬುದ್ಧಿ ಕಲಿಸಿದ್ದು, ಭಾರತದ ಯುವಪೀಳಿಗೆ ಸೈನಿಕರಿಗೆ ಟ್ರಿಬ್ಯೂಟ್‌ ನೀಡಲು ಆಪರೇಷನ್‌ ಸಿಂದೂರ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಆಪರೇಷನ್‌ ಸಿಂದೂರ ಟ್ಯಾಟೂ ಜೊತೆಗೆ ಮಕ್ಕಳಿಗೂ ಕೂಡ ಸಿಂದೂರ ಎನ್ನುವ ಹೆಸರನ್ನು ಇಡಲಾಗುತ್ತಿದೆ.

ನಮ್ಮ ರಾಜ್ಯದ ಹೊಸಪೇಟೆಯಲ್ಲಿ ಆಪರೇಷನ್ ಸಿಂದೂರ ಹಚ್ಚೆ ಟ್ರೆಂಡ್ ಆಗಿದ್ದು, ಪಟ್ಟಣದ ಅನೇಕ ಕಾಲೇಜು ವಿದ್ಯಾರ್ಥಿಗಳು ತೋಳುಗಳ ಮೇಲೆ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ. ಕೇವಲ ಸ್ಥಳೀಯರಷ್ಟೇ ಅಲ್ಲದೆ, ಪಾಕಿಸ್ತಾನವನ್ನು ಮಂಡಿಯೂರಿಸಿದ ಭಾರತೀಯ ಸೈನಿಕರಿಗೆ ಗೌರವವಾಗಿ ಇಸ್ರೇಲಿಗಳು ಸೇರಿದಂತೆ ಅನೇಕ ವಿದೇಶಿ ಪ್ರವಾಸಿಗರು ಕೂಡ ತಮ್ಮ ತೋಳುಗಳ ಮೇಲೆ ‘ಸಿಂದೂರ್’ ಹಚ್ಚೆ ಹಾಕಿಸಿಕೊಳ್ಳುತ್ತಿದ್ದಾರೆ.

ಆಪರೇಷನ್‌ ಸಿಂದೂರ ಹಚ್ಚೆ ಟ್ರೆಂಡ್ ಆಗುತ್ತಿರುವ ಹಿನ್ನೆಲೆಯಲ್ಲಿ ಹಚ್ಚೆ ಅಂಗಡಿಗಳ ವ್ಯಾುಪಾರ ಚುರುಕುಗೊಂಡಿದೆ. ಹಚ್ಚೆಯ ಗಾತ್ರವನ್ನು ಅವಲಂಬಿಸಿ ಕಲಾವಿದರು 600 ರೂ.ಗಳಿಂದ 1,500 ರೂ.ಗಳವರೆಗೆ ಹಣ ಪಡೆಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!