ಹೊಸದಿಗಂತ ಡಿಜಿಟಲ್ ಡೆಸ್ಕ್:
ರಸ್ತೆ, ಮನೆ, ಕ್ಯಾಬ್ ಆಯ್ತು ಇದೀಗ ನಮ್ಮ ಮೆಟ್ರೋ ಕೂಡ ಹೆಣ್ಣುಮಕ್ಕಳಿಗೆ ಸೇಫ್ ಇಲ್ವಾ ಎನ್ನುವ ಪ್ರಶ್ನೆ ಮೂಡಿದೆ. ಮೆಟ್ರೋದಲ್ಲಿ ಇರುವ ಹೆಣ್ಣುಮಕ್ಕಳ ವಿಡಿಯೋ ಹಾಗೂ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಇನ್ಸ್ಟಾಗ್ರಾಮ್ನ “ಮೆಟ್ರೋ ಚಿಕ್ಸ್” ಎಂಬ ಅಕೌಂಟ್ ನಿಂದ ವಿಡಿಯೋ ಅಪ್ಲೋಡ್ ಮಾಡಿ ವಿಕೃತಿ ಮೆರೆದಿದ್ದಾರೆ. ಈ ಇನ್ಸ್ಟಾ ವಿಡಿಯೋ ಮಾಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಕೌಂಟ್ ಸ್ಥಗಿತಗೊಳಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮೆಟ್ರೋದಲ್ಲಿ ಪ್ರಯಾಣಿಸುವ ಯುವತಿಯರ ವಿಡಿಯೋ ಮಾಡ್ತಿದ ಈ ಪುಂಡರು. 13ಕ್ಕೂ ಹೆಚ್ಚು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಮೆಟ್ರೋ ರೈಲಿನ ಒಳಗೆ ಹಾಗೂ ಸ್ಟೇಷನ್ ಹೊರಗೂ ವಿಡಿಯೋ ಮಾಡಿದ್ದಾರೆ.