ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಿಸಂದ್ರದ ಉರ್ದು ಶಾಲೆಯಲ್ಲಿ ನೀಡಿದ್ದ ಪ್ರೊಟೀನ್ ಮಾತ್ರೆ ನುಂಗಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಮಗು 9 ವರ್ಷದ ನಾಲ್ಕನೇ ತರಗತಿ ವಿದ್ಯಾರ್ಥಿನಿ ಝೋಯಾ ಎಂದು ಗುರುತಿಸಲಾಗಿದೆ.
ಬನಶಂಕರಿ 1 ನೇ ಹಂತದಲಿರುವ ಸರ್ಕಾರಿ ಉರ್ದು ಶಾಲೆಯಲ್ಲಿ ಓದುತ್ತಿದ್ದ ಝೋಯಾಗೆ ಶಾಲೆಯಲ್ಲಿ ಪ್ರೋಟೀನ್ ಮಾತ್ರೆ ನೀಡಲಾಗಿತ್ತು. ಶಾಲೆಯಲ್ಲಿ ಕೊಟ್ಟ ಪ್ರೊಟೀನ್ ಮಾತ್ರೆ ತಿಂದ ಮಗುವಿನ ಆರೋಗ್ಯದಲ್ಲಿ ಏರು ಪೇರಾಗಿತ್ತು ಎನ್ನಲಾಗಿದೆ.
ಮಗುವಿನ ಆರೋಗ್ಯ ಹದಗೆಟ್ಟಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬನಶಂಕರಿಯ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ತಡರಾತ್ರಿ ಮಗು ಕೊನೆಯುಸಿರೆಳೆದಿದೆ.