ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲಿವುಡ್ ಸೂಪರ್ ಜೋಡಿ ಸ್ನೇಹಾ ಮತ್ತು ನಟ ಪ್ರಸನ್ನ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಹಬ್ಬಿದ್ದು, ಸ್ನೇಹಾ ಪರೋಕ್ಷವಾಗಿ ವದಂತಿಯನ್ನು ಸುಳ್ಳು ಎಂದು ಜರಿದಿದ್ದಾರೆ.
ಇಬ್ಬರು ಮಕ್ಕಳ ಪೋಷಕರಾದ ಸ್ನೇಹಾ ಪ್ರಸನ್ನ ಇಷ್ಟಪಟ್ಟು ಮದುವೆಯಾದವರು. ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿದ್ದು, ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು, ಆದರೆ ಸ್ನೇಹ ಇದೆಲ್ಲವೂ ಸುಳ್ಳು ಎನ್ನುವಂತೆ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಒಂದೇ ಬಣ್ಣದ ಬಟ್ಟೆ ಧರಿಸಿ ಪತಿ ಕೆನ್ನೆಗೆ ಮುತ್ತಿಡುತ್ತಿರುವ ಫೋಟೊ ಒಂದನ್ನು ಸ್ನೇಹಾ ಹಂಚಿಕೊಂಡಿದ್ದಾರೆ. ಈ ಮೂಲಕ ಇವರಿಬ್ಬರ ಮಧ್ಯೆ ಇರುವ ಪ್ರೀತಿ ಬಗ್ಗೆ ಸ್ನೇಹಾ ಹೇಳಿಕೊಂಡಿದ್ದಾರೆ. ಇವರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಡಿವೋರ್ಸ್ ಸುಳ್ಳು ಸುದ್ದಿ ಎಂದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.