HEALTH | ಊಟ ಮಾಡಿದ್ದು ಸರಿಯಾಗಿ ಜೀರ್ಣ ಆಗ್ತಾ ಇಲ್ವಾ? ಅಡುಗೆಯಲ್ಲಿ ಈ ಕಾಳುಗಳನ್ನು ಮಿಸ್‌ ಮಾಡದೇ ಸೇರಿಸಿ

ಊಟ ಮಾಡಿದ್ದು ಯಾಕೋ ಸರಿಯಾಗಿ ಜೀರ್ಣ ಆಗ್ತಿಲ್ಲ ಅಂದುಕೊಳ್ತಿದ್ದೀರಾ? ತಪ್ಪದೇ ಊಟದಲ್ಲಿ ಕಾಳುಮೆಣಸನ್ನು ಸೇರಿಸಿ, ಇದನ್ನು ಸೇವಿಸುವುದರಿಂದ ಯಾವೆಲ್ಲಾ ಲಾಭ ಇದೆ ನೋಡಿ..

ಕಾಳುಮೆಣಸು ಜೀರ್ಣಕಾರಿ ಕಿಣ್ವಗಳ ಉತ್ಪಾದನೆ ಉತ್ತೇಜಿಸುತ್ತದೆ ಮತ್ತು ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಕಾಳುಮೆಣಸಿನಲ್ಲಿರುವ ಸಂಯುಕ್ತ ಪೈಪರೀನ್ ಕರುಳಿನ ಕಾರ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕಾಳುಮೆಣಸಿನಲ್ಲಿ ಉತ್ಕರ್ಷಣ ನಿರೋಧಕಗಳು, ಬ್ಯಾಕ್ಟೀರಿಯಾ ವಿರೋಧಿ ಹಾಗೂ ಆ್ಯಂಟಿವೈರಲ್ ಗುಣಲಕ್ಷಣಗಳಿವೆ. ಇವು ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತವೆ ಹಾಗೂ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.

ಕಾಳುಮೆಣಸು ಶೀತ, ಕೆಮ್ಮು ಮತ್ತು ಜ್ವರದಂತಹ ಸಮಸ್ಯೆಗಳಿಂದ ತ್ವರಿತ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ. ಪ್ರತಿದಿನ ರಾತ್ರಿ ಮಲಗುವ ಮೊದಲು ಕಾಳುಮೆಣಸು ಮತ್ತು ಅರಿಶಿನದೊಂದಿಗೆ ಬೇಯಿಸಿದ ಹಾಲನ್ನು ಕುಡಿಯುವುದರಿಂದ ಉಸಿರಾಟದ ತೊಂದರೆಗಳು ಉಂಟಾಗುವುದನ್ನು ತಡೆಯುತ್ತದೆ.

ಕಾಳುಮೆಣಸು ದೇಹದಲ್ಲಿ ಚಯಾಪಚಯ ಹೆಚ್ಚಿಸುವ ಮೂಲಕ ಕೊಬ್ಬನ್ನು ವೇಗವಾಗಿ ಕರಗಿಸಲು ಸಹಾಯಕ. ಇದರಲ್ಲಿರುವ ಪೈಪರಿನ್ ಗುಣಲಕ್ಷಣಗಳು ಹೆಚ್ಚುವರಿ ತೂಕವನ್ನು ಕಡಿಮೆ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!