May 20, 2026
Wednesday, May 20, 2026
spot_img

IPL ನಲ್ಲಿ ‘ಬ್ಲಾಕ್ ಮ್ಯಾಜಿಕ್’ ನಡೀತಿದ್ಯಾ ಏನ್ ಕಥೆ?: ನಿಂಬೆ ಹಣ್ಣು ತೆಗೆದು ಮಂತ್ರ ಜಪಿಸುತ್ತಿದ್ದಂಗೆ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರ 27ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆಲುವು ಸಾಧಿಸಿದ ಬಳಿಕ, ಪಂದ್ಯಕ್ಕಿಂತ ಹೆಚ್ಚು ಚರ್ಚೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಒಂದು ವಿವಾದಾತ್ಮಕ ವಿಡಿಯೋ. ಈ ವಿಡಿಯೋ ಆಧರಿಸಿ ಚೆನ್ನೈ ಸೂಪರ್ ಕಿಂಗ್ಸ್ ಸೋಲಿಗೆ ‘ಮಾಟ-ಮಂತ್ರ’ ಕಾರಣ ಎಂಬ ವದಂತಿ ಹರಡಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ 195 ರನ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿ ಸೋಲು ಅನುಭವಿಸಿತು. ಇದರೊಂದಿಗೆ ಸಿಎಸ್‌ಕೆ ಲೀಗ್‌ನಲ್ಲಿ ನಾಲ್ಕನೇ ಸೋಲು ಕಂಡರೆ, ಹೈದರಾಬಾದ್ ಮೂರನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೇರಿತು.

ಆದರೆ ಪಂದ್ಯ ನಂತರ ವೈರಲ್ ಆದ ವಿಡಿಯೋದಲ್ಲಿ, ಹೈದರಾಬಾದ್ ತಂಡದ ಜೆರ್ಸಿ ಧರಿಸಿದ್ದ ವ್ಯಕ್ತಿಯೊಬ್ಬ ಮೈದಾನದಲ್ಲೇ ನಿಂಬೆಹಣ್ಣು ಹಿಡಿದು ಏನೋ ಮಂತ್ರ ಜಪಿಸುತ್ತಿರುವ ದೃಶ್ಯ ಕಾಣಿಸಿಕೊಂಡಿದೆ. ಅದೇ ಸಮಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಶಿವಂ ದುಬೆ ಔಟ್ ಆಗಿರುವುದು ವಿಡಿಯೋದಲ್ಲಿ ಕಾಣುತ್ತದೆ. ಇದರಿಂದಾಗಿ ಕೆಲವರು ‘ಬ್ಲಾಕ್ ಮ್ಯಾಜಿಕ್’ ನಡೆದಿದೆ ಎನ್ನುವ ವದಂತಿ ಹರಿದಾಡುತ್ತಿದೆ.

ಆದರೆ ವಾಸ್ತವದಲ್ಲಿ, ಈ ಘಟನೆ ಕೇವಲ ಕಾಕತಾಳೀಯವಾಗಿರುವ ಸಾಧ್ಯತೆ ಹೆಚ್ಚು. ವಿಡಿಯೋದಲ್ಲಿರುವ ವ್ಯಕ್ತಿಯ ಕ್ರಿಯೆ ಮತ್ತು ವಿಕೆಟ್ ಬೀಳುವ ಘಟನೆ ನಡುವೆ ಯಾವುದೇ ವೈಜ್ಞಾನಿಕ ಅಥವಾ ಸಂಬಂಧ ಇಲ್ಲ. ಈ ರೀತಿಯ ಮೂಢನಂಬಿಕೆಗಳಿಗೆ ಯಾವುದೇ ಆಧಾರ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಇದೇ ವೇಳೆ, ಸಿಎಸ್‌ಕೆ ಆಡಳಿತ ಮಂಡಳಿ ಈ ವಿಚಾರವಾಗಿ ಬಿಸಿಸಿಐಗೆ ದೂರು ನೀಡಿದೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ಆದರೆ ಈ ಕುರಿತು ತಂಡದ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ವೈರಲ್ ಆಗಿರುವ ದೂರಿನ ಪ್ರತಿ ನಕಲಿ ಆಗಿರುವ ಸಾಧ್ಯತೆ ಇದ್ದು, ಇದರಲ್ಲಿ ಯಾವುದೇ ದೃಢಪಡಿಸಿದ ಮಾಹಿತಿ ಇಲ್ಲ.

ಒಟ್ಟಿನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವದಂತಿಗಳು ಕೇವಲ ಊಹಾಪೋಹಗಳೋ ನಿಜವೋ ಎಂಬುದು, ಇನ್ನೂ ಸ್ಪಷ್ಟವಾಗಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !