March 22, 2026
Sunday, March 22, 2026
spot_img

ಈಕೆ ಮನುಷ್ಯಳಾ? ಲಿಫ್ಟ್‌ನಲ್ಲಿ ನಾಯಿಯನ್ನು ನೆಲಕ್ಕೆ ಬಡಿದು ಕೊಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮನೆಕೆಲಸದಾಕೆಯೊಬ್ಬಳು ಲಿಫ್ಟ್‌ನಲ್ಲಿ ನಾಯಿಮರಿಯನ್ನು ನೆಲಕ್ಕೆ ಬಡಿದು ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆ ಬಾಗಲೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದಿದೆ.

ಅಕ್ಟೋಬರ್ 31ರಂದು ಕೃತ್ಯ ನಡೆದಿದ್ದು, ಮನೆ ಕೆಲಸದಾಕೆ ನಡೆಸಿರುವ ಅಮಾನವೀಯ ಕೃತ್ಯ ಲಿಫ್ಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಾಯಿ ನೋಡಿಕೊಳ್ಳಲೆಂದೇ ಪುಷ್ಪಾಲತಾಳನ್ನು ನೇಮಿಸಲಾಗಿತ್ತು. ನಾಯಿ ಸಾಯಿಸಿದ ಬಳಿಕ ಲಿಫ್ಟ್ ಹೊರಗೆ ಹೋಗಿ ಪ್ರಜ್ಞೆ ತಪ್ಪಿ ಬಿತ್ತು ಎಂದು ಮಹಿಳೆ ಕಥೆ ಕಟ್ಟಿದ್ದಳು.

ಈ ಬಗ್ಗೆ ಶ್ವಾನದ ಮಾಲಕಿ ಸೆಕ್ಯೂರಿಟಿ ಬಳಿ ವಿಚಾರಿಸಿದಾಗ ಮಾಹಿತಿ ದೊರಕಿದೆ. ಅನುಮಾನ ಬಂದು ಸಿಸಿಟಿವಿ ಪರಿಶೀಲನೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಮಹಿಳೆ ವಿರುದ್ಧ ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !