ಗೊಂಡಾ ರೈಲು ದುರಂತದ ಹಿಂದೆ ಇದ್ಯಾ ವಿಧ್ವಂಸಕ ಕೃತ್ಯ?: ಲೋಕೋ ಪೈಲಟ್ ಕೊಟ್ಟ ಮಾಹಿತಿ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಗೊಂಡಾದಲ್ಲಿ ಚಂಡೀಗಢ-ದಿಬ್ರುಗಢ ಎಕ್ಸ್​​ಪ್ರೆಸ್​​ ರೈಲು ಅಪಘಾತದಲ್ಲಿ ೪ ಮೃತಪಟ್ಟಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಈಡಿಗ ಈ ದುರ್ಘಟನೆ ಹಿಂದೆ ವಿಧ್ವಂಸಕ ಕೃತ್ಯ ಇದೆಯೇ ಎಂಬ ಶಂಕೆ ವ್ಯಕ್ತವಾಗಿದ್ದು,ಲೋಕೋ ಪೈಲೆಟ್‌ ಮಾಹಿತಿಯಂತೆ ಘಟನೆಗೆ ಮುನ್ನ ದೊಡ್ಡ ಶಬ್ದ ಕೇಳಿಸಿತ್ತು ಎಂದಿದ್ದಾರೆ.

ಹಳಿ ತಪ್ಪಿದ ರೈಲಿನ ಚಾಲಕ ಅಪಘಾತದ ಮೊದಲು ದೊಡ್ಡ ಸ್ಫೋಟದ ಶಬ್ದ ಕೇಳಿಸಿತು ಎಂದು ಲೋಕೋ ಪೈಲಟ್ ಹೇಳಿದ್ದಾರೆ. ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್‌ನ ಲೋಕೋ ಪೈಲಟ್, ಅಪಘಾತದ ಮೊದಲು ಸ್ಫೋಟದ ಶಬ್ದ ಕೇಳಿದೆ, ಹೀಗಾಗಿ ವಿಧ್ವಂಸಕ ಕೃತ್ಯದ ದೃಷ್ಟಿಯಿಂದ ತನಿಖೆ ಪ್ರಾರಂಭವಾಗಿದೆ ಎಂದಿದ್ದಾರೆ.

ಎಕ್ಸ್​ಪ್ರೆಸ್​​ ರೈಲಿನ ಹಲವಾರು ಬೋಗಿಗಳು ಹಳಿ ತಪ್ಪಿದ ಪರಿಣಾಮ ದುರ್ಘಟನೆ ಸಂಭವಿಸಿದೆ. ಉತ್ತರ ಪ್ರದೇಶದ ಗೊಂಡಾ ಮತ್ತು ಜಿಲಾಹಿ ನಡುವೆ ಇರುವ ಪಿಕೌರಾ ಪ್ರದೇಶದಲ್ಲಿ ರೈಲು ಅವಘಡ ಸಂಭವಿಸಿದೆ.

ರೈಲು ಅವಘಡ ನಡೆದ ಸ್ಥಳಕ್ಕೆ ಪರಿಹಾರ ಕಾರ್ಯಾಚರಣೆಗಾಗಿ ರಕ್ಷಣಾ ತಂಡವನ್ನು ಕಳುಹಿಸಲಾಗಿದೆ. ಕೆಲವು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ ಮತ್ತು ಪ್ರಯಾಣಿಕರು ತಮ್ಮ ಸರಂಜಾಮುಗಳನ್ನು ಹಿಡಿದುಕೊಂಡು ಹಳಿಯ ಬದಿಗಳಲ್ಲಿ ನಿಂತಿರುವುದು ದೃಶ್ಯಗಳಲ್ಲಿ ಕಂಡು ಬಂದಿದೆ. ರೈಲು ಸಂಖ್ಯೆ 15904 ಚಂಡೀಗಢದಿಂದ ಅಸ್ಸಾಂನ ದಿಬ್ರುಗಢಕ್ಕೆ ತೆರಳುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 12 ಬೋಗಿಗಳೊಂದಿಗೆ ರೈಲು ಸಂಚರಿಸುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ಅದರ ಪೈಕಿ ನಾಲ್ಕು ಬೋಗಿಗಳು ಜುಲಾಹಿ ರೈಲ್ವೆ ನಿಲ್ದಾಣದ ಕೆಲವು ಕಿಲೋಮೀಟರ್ ಮೊದಲು ಹಳಿ ತಪ್ಪಿವೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಪಘಾತದ ಸ್ಥಳಕ್ಕೆ ತಕ್ಷಣ ತಲುಪುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಪರಿಹಾರ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಗಾಯಾಳುಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವಂತೆ ಸಿಎಂ ಹೇಳಿದ್ದಾರೆ. ರೈಲ್ವೆ ವೈದ್ಯಕೀಯ ಕ್ಯಾನ್ ಸ್ಥಳಕ್ಕೆ ತಲುಪಿದೆ ಮತ್ತು ಈಶಾನ್ಯ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!