VIRAL | ಇದೇನು ದೇವಲೋಕನಾ? ಏರ್‌ಪೋರ್ಟಾ? ಬೆಂಗಳೂರು ವಿಮಾನ ನಿಲ್ದಾಣಕ್ಕೆ ಜಪಾನ್‌ ಪ್ರಜೆ ಫಿದಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಗ್ರೀನ್‌ ಏರ್‌ಪೋರ್ಟ್‌ ಪರಿಕಲ್ಪನೆಯಲ್ಲಿ ನಿರ್ಮಾಣವಾದ ನಮ್ಮ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2 ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣ ಎನ್ನಬಹುದು. ಈ ಏರ್‌ಪೋರ್ಟ್‌ ಅಂದಕ್ಕೆ ಮನಸೋಲದವರಿಲ್ಲ.

ಈ ವಿಮಾನ ನಿಲ್ದಾಣಕ್ಕೆ ಭೇಟಿ ಕೊಟ್ಟಂತಹ ಜಪಾನ್‌ ಮಹಿಳೆಯೊಬ್ಬರೂ ಕೂಡಾ ಇಲ್ಲಿನ ಸೌಂದರ್ಕ್ಕೆ ಮಾರು ಹೋಗಿದ್ದು, ಅರೇ ಭಾರತದ ವಿಮಾನ ನಿಲ್ದಾಣದಲ್ಲಿ ಇದ್ದೇನೆಂದು ನಂಬಲಾಗುತ್ತಿಲ್ಲ ಎನ್ನುತ್ತಾ ಫುಲ್‌ ಶಾಕ್‌ ಆಗಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಜಪಾನಿನ ಟ್ರಾವೆಲ್‌ ವ್ಲಾಗರ್‌ ಕಿಕಿ ಚೆನ್‌ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 2 ರಲ್ಲಿ ಬಂದಿಳಿದಾಗ ಇಲ್ಲಿನ ಅದ್ಭುತ ಸೌಂದರ್ಯವನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ಈ ಕುರಿತ ವಿಡಿಯೋವನ್ನು ಆಶೇಂದ್ರ ಪಟೇಲ್‌ (IamAshendra) ಎಂಬವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಜಪಾನ್‌ ಟ್ರಾವೆಲ್‌ ವ್ಲೋಗರ್‌ ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್‌ 2 ರ ಸೊಬಗನ್ನು ಕಂಡು ಮನಸೋತಂತಹ ದೃಶ್ಯವನ್ನು ಕಾಣಬಹುದು. ಆಕೆ ಏರ್‌ಪೋರ್ಟ್‌ನಲ್ಲಿರುವ ಈವೆಂಟ್‌ ಸ್ಪೇಸ್‌, ನಿಕೋಬಾರ್‌ ಲೌಂಜ್‌, ಎಂಟರ್ಟೈನ್ಮೆಂಟ್‌ ಏರಿಯಾಗಳನ್ನೆಲ್ಲಾ ತಿರುಗಾಡುತ್ತಾ ನಾನು ಭಾರತದಲ್ಲಿನ ವಿಮಾನ ನಿಲ್ದಾಣದಲ್ಲಿ ಇದ್ದೇನೆಂದು ನನಗೆ ನಂಬಲಾಗುತ್ತಿಲ್ಲ ಎನ್ನುತ್ತಾ ಏರ್‌ಪೋರ್ಟ್‌ ಸೌಂದರ್ಯವನ್ನು ಕಂಡು ಮನಸೋತಿದ್ದಾರೆ.

 

View this post on Instagram

 

A post shared by KIKI CHEN or YIN (@chromaticcharms)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!