ಮಾನವೀಯತೆ ಅನ್ನೋದು ನಿಜಕ್ಕೂ ಇದ್ಯಾ? ಕ್ಯಾನ್ಸರ್‌ ಬಂದ ಅಜ್ಜಿಯನ್ನು ಕಸದರಾಶಿಯಲ್ಲಿ ಎಸೆದ ಮೊಮ್ಮಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ತನ್ನನ್ನು ಸಾಕಿ, ಬೆಳೆಸಿ, ಮುದ್ದು ಮಾಡಿ ಬೆಳೆಸಿದ ಅಜ್ಜಿಗೆ ಕ್ಯಾನ್ಸರ್‌ ಬಂದಿದೆ ಎಂದು ಮೊಮ್ಮಗನೇ ಅಜ್ಜಿಯನ್ನು ಕಸದ ತೊಟ್ಟಿಯಲ್ಲಿ ಹಾಕಿ ಹೋಗಿದ್ದಾನೆ.

ಹೃದಯ ವಿದ್ರಾವಕ ಘಟನೆ ಮುಂಬೈನಲ್ಲಿ ನಡೆದಿದೆ. 60 ವರ್ಷದ ಯಶೋಧಾ ಗಾಯಕ್ವಾಡ್ ಅವರನ್ನು ಸ್ವಂತ ಮೊಮ್ಮಗನೇ ಕಸದ ರಾಶಿಯಲ್ಲಿ ಎಸೆದಿದ್ದಾನೆ.

ಯಶೋಧಾ ಚರ್ಮದ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಶನಿವಾರ ಬೆಳಗ್ಗೆ ಆರ್​ ಕಾಲೋನಿಯ ರಸ್ತೆಬದಿಯ ಕಸದ ರಾಶಿಯ ಮೇಲೆ ಮಹಿಳೆಯೊಬ್ಬರು ದುರ್ಬಲ ಸ್ಥಿತಿಯಲ್ಲಿ ಮಲಗಿರುವುದನ್ನು ಅಲ್ಲೇ ಹೋಗುತ್ತಿದ್ದವರ್ಯಾರೋ ನೋಡಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಹಿಳೆಯ ಕುಟುಂಬದವರನ್ನು ಹುಡುಕಲು ಪೊಲೀಸರು ಮುಂದಾಗಿದ್ದಾರೆ.

ಬೆಳಗ್ಗೆ ಮಹಿಳೆ ಪತ್ತೆಯಾಗಿದ್ದರೂ ಸಂಜೆ 5.30ರ ಹೊತ್ತಿಗೆ ಮಾತ್ರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಯಿತು. ಮಹಿಳೆ ತನ್ನ ಕುಟುಂಬ ಸದಸ್ಯರ ಎರಡು ನಿವಾಸಗಳ ವಿಳಾಸವನ್ನು ಹಂಚಿಕೊಂಡಿದ್ದಾರೆ. ಒಂದು ಮಲಾಡ್‌ನಲ್ಲಿ ಮತ್ತು ಇನ್ನೊಂದು ಕಾಂಡಿವಲಿಯಲ್ಲಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಸಂಬಂಧಿಕರನ್ನು ಪತ್ತೆಹಚ್ಚಲು ಆಕೆಯ ಚಿತ್ರವನ್ನು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಹಂಚಿಕೊಳ್ಳಲಾಗಿದೆ. ಮೊಮ್ಮಗ ಈ ರೀತಿಯ ಅಮಾನವೀಯ ಕೆಲಸವನ್ನು ಏಕೆ ಮಾಡಿದನೆಂದು ಸ್ಪಷ್ಟವಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!