ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಮನೆಯ ಕುರಿತು ಸದ್ಯ ಸಿಕ್ಕಾಪಟ್ಟೆ ಸುದ್ದಿಯಾಗ್ತಿರೋ ವಿಚಾರ ಅಂದರೆ ಸಂಗೀತಾ- ಪ್ರತಾಪ್ (Prathap) ಜೊತೆ ಸ್ಪರ್ಧಿಗಳ ವರ್ತನೆ .
ಟಾಸ್ಕ್ ಹೆಸರಿನಲ್ಲಿ ಬಿಗ್‌ಬಾಸ್ ಸ್ಪರ್ಧಿಗಳಾದ ಸಂಗೀತಾ ಮತ್ತು ಡ್ರೋನ್ ಪ್ರತಾಪ್ ಅವರ ಕಣ್ಣಿಗೆ ಹಾನಿಯಾಗಿದ್ದು, ಈ ಕುರಿತು ಸಂಗೀತಾ ಸಹೋದರ ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದಾರೆ.
ಸಂಗೀತಾ ಶೃಂಗೇರಿ ಸಹೋದರ ಸಂತೋಷ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟ ಸುದೀಪ್ ಹಾಗೂ ವಾಹಿನಿಗೆ ಕುರಿತು ಬೇಸರ ಹೊರಹಾಕಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದು, ಅದರ ಸ್ಕ್ರಿನ್‌ಶಾಟ್ ವೈರಲ್ ಆಗುತ್ತಿದೆ.
ಸುದೀಪ್ ಸರ್, ನೀವು ಹೇಳಿದ್ದಿರಿ. ಬಿಗ್‌ಬಾಸ್ ಮನೆ ಸುರಕ್ಷಿತ. ಏನು ಆಗಲ್ಲ ಅಂತ. ಆದರೆ ಈಗ ನೋಡಿದ್ರೆ, ಇದು ಹಾಗಿಲ್ಲ. ಇದು ಕುಟುಂಬದ ಶೋ ಅಂತ ಕಾಣಲ್ಲ. ಕೇವಲ ಹಿಂಸೆಯೇ ಕಾಣ್ತಿದೆ. ಕುಟುಂಬದವರು ಈ ರೀತಿಯ ಆಕ್ರಮಣಕಾರಿ ವರ್ತನೆಯನ್ನು ಹೇಗೆ ನೋಡ್ತಾರೆ ಎಂದು ಪ್ರಶ್ನಿಸಿದ್ದಾರೆ. ವಾಹಿನಿ, ನಾವ್ ಸುದೀಪ್ ಸರ್ ಇದರ ಬಗ್ಗೆ ಸರಿ ಮಾಡುವವರೆಗೂ ನಾವು ಯಾಕೆ ಕಾಯಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಬಿಗ್ ಬಾಸ್ ಇರೋದು ಜನರ ತಪ್ಪುಗಳನ್ನು ತಕ್ಷಣ ಅವರಿಗೆ ಅರ್ಥ ಮಾಡಿಸಲು ಅಲ್ಲವೇ? ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೀಕ್ಷಕರು ಕೂಡ ಈ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ.