ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂದೀಪ್ ರೆಡ್ಡಿ ವಂಗಾ ಸಿನಿಮಾ ಸ್ಪಿರಿಟ್ ಇದೀಗ ಮತ್ತೆ ಗಾಸಿಪ್ಗೆ ಆಹಾರವಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ಗೆ ನಟಿಯಾಗಿ ದೀಪಿಕಾ ಪಡುಕೋಣೆಯನ್ನು ಆರಿಸಲಾಗಿತ್ತು. ಆದರೆ ಇದ್ದಕ್ಕಿದ್ದಂತೆಯೇ ಸಿನಿಮಾದಿಂದ ದೀಪಿಕಾರನ್ನು ಹೊರತಳ್ಳಿದ್ದು, ತೃಪ್ತಿ ದಿಮ್ರಿಯನ್ನು ಹೀರೋಯಿನ್ ಎಂದು ಘೋಷಣೆ ಮಾಡಲಾಗಿದೆ.
ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಈ ಬಗ್ಗೆ ಟ್ವೀಟ್ ಒಂದನ್ನು ಮಾಡಿ ಇಂಡೈರೆಕ್ಟ್ ಆಗಿ ದೀಪಿಕಾಗೆ ಬೈದಿದ್ದಾರೆ. ನಾನು ಕಲಾವಿದರಿಗೆ ಕಥೆ ಹೇಳುವಾಗ 100% ನಂಬಿಕೆ ಇಡುತ್ತೇನೆ. ಯಾರಿಗೂ ಕಥೆ ಹೇಳಬಾರದು ಅಂತ ನಮ್ಮ ನಡುವೆ ಒಪ್ಪಂದ ಆಗಿರುತ್ತದೆ. ಆ ನಿಯಮವನ್ನು ಮುರಿಯುವ ಮೂಲಕ ನೀವೇನು ಎಂಬುದನ್ನು ತೋರಿಸಿದ್ದೀರಿ. ಕಿರಿಯ ಕಲಾವಿದರನ್ನು ಕೆಳಗೆ ಹಾಕಿದ್ದಲ್ಲದೇ, ನನ್ನ ಸ್ಟೋರಿಯನ್ನು ಲೀಕ್ ಮಾಡಿದ್ದೀರಿ. ಇದೇನಾ ನಿಮ್ಮ ಸ್ತ್ರೀವಾದ ಎಂದು ಅವರು ಪ್ರಶ್ನಿಸಿದ್ದಾರೆ.
ಒಬ್ಬ ಫಿಲ್ಮ್ ಮೇಕರ್ ಆಗಿ, ನಾನು ನನ್ನ ಚಿತ್ರಕ್ಕಾಗಿ ವರ್ಷಗಳ ಕಠಿಣ ಪರಿಶ್ರಮ ಹಾಕಿದ್ದೇನೆ. ಫಿಲ್ಮ್ ಮೇಕಿಂಗ್ ನನಗೆ ಎಲ್ಲವೂ ಆಗಿದೆ. ಅದಕ್ಕೆ ನಾವು ಸಂಪೂರ್ಣವಾಗಿ ಕೆಲಸ ಮಾಡಿರುತ್ತೇವೆ. ಒಂದು ಕೆಲಸ ಮಾಡಿ ಮುಂದಿನ ಬಾರಿ ಸಂಪೂರ್ಣ ಕಥೆ ಹೇಳಿಬಿಡಿ, ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಕೆಂಡಕಾರಿದ್ದಾರೆ.