ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಯೋತ್ಪಾದನೆ ಬೆಳೆಸುವ ಕೇಂದ್ರಗಳಿಗೆ ಕಾಂಗ್ರೆಸ್‌ನವರು ನೀರು ಗೊಬ್ಬರ ಹಾಕಿ ಪೋಷಿಸುತ್ತಿದ್ದಾರೆ ಎಂದು ಪರಿಷತ್ ಸದಸ್ಯ ಸಿ.ಟಿ ರವಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವ್ರು ಯಾಕೆ ಕದನ ನಿಲ್ಲಿಸಿದ್ರಿ ಅಂತಿದ್ದಾರೆ. ಇನ್ನು ಕೆಲವರು ಕೇವಲ ನಾಲ್ಕು ವಿಮಾನ ಹಾರಿಸಿದ್ರು ಅಂದಿದ್ದಾರೆ. ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ದಿನೇಶ್, ಕೊತ್ತೂರು ಮಂಜುನಾಥ್ ಇವರಿಗೆಲ್ಲ ಆಪರೇಷನ್ ಸಿಂದೂರದ ಬಗ್ಗೆ ಅಪಪ್ರಚಾರ ಮಾಡುವ ಟಾಸ್ಕ್ ಕೊಟ್ಟಂಗೆ ಕಾಣ್ತಿದೆ ಎಂದರು.
ಇಡೀ ದೇಶ ಯುದ್ಧ ಬೇಕು ಅನ್ನುವಾಗ ಸಿದ್ದರಾಮಯ್ಯ ಯುದ್ಧ ಬೇಡ ಅಂದ್ರು. ನಂತರ ಸಿದ್ದರಾಮಯ್ಯ ಹಣೆ ಮೇಲೆ ದೊಡ್ಡ ಕುಂಕುಮ ಹಾಕಿಕೊಂಡು ಸುದ್ದಿಗೋಷ್ಠಿ ಮಾಡಿ ಸೈನಿಕರನ್ನು ಶ್ಲಾಘಿಸಿದರು. ಇಡೀ ಕ್ರೆಡಿಟ್ ಸೈನ್ಯಕ್ಕೆ ಅಂದ ಸಿದ್ದರಾಮಯ್ಯ ಈಗ ಅಪಪ್ರಚಾರ ಯಾಕೆ ಮಾಡ್ತಿದ್ದಾರೆ. ನಿಮ್ಮ ಅಪಪ್ರಚಾರ ಸೈನ್ಯದ ಬಗ್ಗೆನೋ ಅಥವಾ ರಾಜಕೀಯ ನಾಯಕತ್ವಕ್ಕೋ ಎಂದು ಪ್ರಶ್ನಿಸಿದರು.
ಭಯೋತ್ಪಾದನೆ ಬೆಳೆಸುವ ಕೇಂದ್ರಗಳಿಗೆ ನೀರು ಗೊಬ್ಬರ ಹಾಕಿ ಕಾಂಗ್ರೆಸ್‌ನವರು ಪೋಷಿಸುತ್ತಿದ್ದಾರೆ. ಕಾಂಗ್ರೆಸ್‌ನವರ ಮನಸ್ಥಿತಿ ಬದಲಾಗಬೇಕು. ಭಯೋತ್ಪಾದನೆಯೆ ಡಿಎನ್‌ಎ ಕಿತ್ತು ಹಾಕಿ ಮೊದಲು. ಆ ಡಿಎನ್‌ಎ ಕರ್ನಾಟಕದಲ್ಲೂ ಇದೆ, ಜಗತ್ತಲ್ಲೂ ಇದೆ. ಮೊದಲು ಇದನ್ನ ಮಟ್ಟ ಹಾಕಬೇಕು ಎಂದು ಗುಡುಗಿದರು.