ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಭಯೋತ್ಪಾದಕ ಮ್ಯಾಗಝಿನ್ ವಾಯ್ಸ್ ಆಫ್ ಖುರಾಸನ್‌ನಲ್ಲಿ ಭಾರತ ಹಾಗೂ ಹಿಂದೂಗಳಿಗೆ ಐಸಿಸ್ ಬೆದರಿಕೆ ಹಾಕಿದೆ.
ವಾಯ್ಸ್ ಆಫ್ ಖುರಾಸನ್‌ನ 32ನೇ ಆವೃತ್ತಿಯಲ್ಲಿ ಬೆದರಿಕೆ ಹಾಕಿದ್ದು, ಹತ್ಯಾಕಾಂಡ ನಡೆಸುವುದಾಗಿ ಹೇಳಿದೆ. ಹಲವಾರು ಮಾಧ್ಯಮಗಳು ಹಾಗೂ ಡಾರ್ಕ್ ವೆಬ್‌ಗಳಲ್ಲಿ ಈ ಸಂಚಿಕೆ ಪ್ರಸಾರವಾಗಿದೆ.
ಇಲ್ಲಿ ಬಾಬ್ರಿ ಮಸೀದಿ ಜಾಗದಲ್ಲಿ ಮಂದಿರ ನಿರ್ಮಾಣ, ಗುಜರಾತ್ ಗಲಭೆ ಸೇರಿದಂತೆ ಇನ್ನಿತರ ವಿಷಯಗಳನ್ನು ಉಲ್ಲೇಖಿಸಲಾಗಿದ್ದು, ಇವುಗಳಿಗೆ ಸೇಡು ತೀರಿಸಿಕೊಳ್ಳುವುದಾಗಿ ಹೇಳಲಾಗಿದೆ.
ಐಸಿಸ್ ಕಡೆಯಿಂದ ಈ ರೀತಿ ಬೆದರಿಕೆಗಳು ಬಂದಿರುವುದು ಇದು ಮೊದಲೇನಲ್ಲ, ಆದರೆ ಭಾರತೀಯ ಸೇನೆ ಎಷ್ಟು ಬಲಶಾಲಿಯಾಗಿದೆ ಎಂದರೆ ಈಗಾಗಲೇ ಹಲವು ಬಾರಿ ಭಯೋತ್ಪಾದಕರನ್ನು ಸದೆಬಡೆದಿದೆ.