ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾದ ಪ್ಯಾಲೇಸ್ಟಿನಿಯನ್ ಭೂಪ್ರದೇಶವನ್ನು ನಡೆಸುತ್ತಿರುವ ಇಸ್ಲಾಮಿಸ್ಟ್ ಗುಂಪು ಹಮಾಸ್‌ನ ನಾಯಕ ಇಸ್ಮಾಯಿಲ್ ಹನಿಯೆಹ್ ಅವರನ್ನು ಇರಾನ್‌ನ ಟೆಹ್ರಾನ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಹಮಾಸ್ ದೃಢಪಡಿಸಿದೆ.
“ವೀರ ರಾಷ್ಟ್ರವಾದ ಪ್ಯಾಲೆಸ್ಟೈನ್ ಮತ್ತು ಇಸ್ಲಾಮಿಕ್ ರಾಷ್ಟ್ರ ಮತ್ತು ರೆಸಿಸ್ಟೆಂಟ್ ಫ್ರಂಟ್ ಮತ್ತು ಇರಾನ್‌ನ ಉದಾತ್ತ ರಾಷ್ಟ್ರದ ಹೋರಾಟಗಾರರಿಗೆ ಸಂತಾಪ ಸೂಚಿಸಿ, ಇಂದು ಬೆಳಿಗ್ಗೆ ಹಮಾಸ್ ಇಸ್ಲಾಮಿಕ್ ರೆಸಿಸ್ಟೆನ್ಸ್‌ನ ರಾಜಕೀಯ ಕಚೇರಿಯ ಮುಖ್ಯಸ್ಥರಾದ ಡಾ. ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆ ನಡೆದಿದೆ, ಈ ಘಟನೆಯ ನಂತರ, ಅವರ ಅಂಗರಕ್ಷಕರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ” ಎಂದು IRGC (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್) ತಿಳಿಸಿದೆ.
ಇರಾನ್‌ನ ಹೊಸ ಅಧ್ಯಕ್ಷರಾದ ಮಸೌದ್ ಪೆಜೆಶ್ಕಿಯಾನ್ ಅವರ ಪ್ರಮಾಣವಚನ ಸಮಾರಂಭಕ್ಕಾಗಿ ಹಮಾಸ್ ಮುಖ್ಯಸ್ಥರು ಇರಾನ್ ರಾಜಧಾನಿಯಲ್ಲಿದ್ದರು ಎನ್ನಲಾಗಿದೆ.