February 4, 2026
Wednesday, February 4, 2026
spot_img

ಕೋರ್ಟ್ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ? ಖ್ಯಾತ ನಟನಿಗೆ ಬಿಗಿಯಾದ ಕಾನೂನು ಕುಣಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಪ್ರೇಕ್ಷಕರನ್ನು ತನ್ನ ಮ್ಯಾನರಿಸಂ ಮೂಲಕ ನಗಿಸುತ್ತಿದ್ದ ರಾಜ್‌ಪಾಲ್ ಯಾದವ್ ಅವರಿಗೆ ಈಗ ನಿಜ ಜೀವನದಲ್ಲಿ ಸಂಕಷ್ಟ ಎದುರಾಗಿದೆ. ಹಳೆಯ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನಟನ ವಿರುದ್ಧ ಕಠಿಣ ನಿಲುವು ತಳೆದಿದ್ದು, ಕೂಡಲೇ ಜೈಲು ಅಧಿಕಾರಿಗಳ ಮುಂದೆ ಶರಣಾಗುವಂತೆ ಆದೇಶಿಸಿದೆ.

ರಾಜ್‌ಪಾಲ್ ಯಾದವ್ ವಿರುದ್ಧದ ಹಣಕಾಸು ವ್ಯವಹಾರದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅವರಿಗೆ ದೂರುದಾರರಿಗೆ ಹಣ ಪಾವತಿಸುವಂತೆ 2024ರಲ್ಲೇ ಸೂಚಿಸಿತ್ತು. ಆದರೆ, ಕೋರ್ಟ್ ನೀಡಿದ್ದ ಗಡುವಿನೊಳಗೆ ಅವರು ಬಾಕಿ ಮೊತ್ತವನ್ನು ಪಾವತಿಸದ ಕಾರಣ, ಈಗ ಜೈಲು ಶಿಕ್ಷೆ ಅನಿವಾರ್ಯವಾಗಿದೆ.

ಇದನ್ನೂ ಓದಿ:

ಈ ಕುರಿತು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ನಟನ ವರ್ತನೆಗೆ ಆಶ್ಚರ್ಯ ವ್ಯಕ್ತಪಡಿಸಿದೆ. ಯಾದವ್ ಅವರು ನ್ಯಾಯಾಲಯದ ಆದೇಶಗಳನ್ನು ಪದೇ ಪದೇ ನಿರ್ಲಕ್ಷಿಸಿದ್ದಾರೆ. ಸುಮಾರು ₹2.10 ಕೋಟಿ ಮೊತ್ತವನ್ನು ರಿಜಿಸ್ಟ್ರಾರ್ ಜನರಲ್ ಬಳಿ ಠೇವಣಿ ಇಡುವಂತೆ ಸೂಚಿಸಿದ್ದರೂ, ನಟ ಆ ಬಗ್ಗೆ ಗಮನ ಹರಿಸಿಲ್ಲ. “ಆರೋಪಿಯು ನಿಯಮಗಳನ್ನು ಉಲ್ಲಂಘಿಸಿರುವುದನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಎಚ್ಚರಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !