ಬೈರೂತ್‌ ಮೇಲೆ ಇಸ್ರೇಲ್‌ ವೈಮಾನಿಕ ದಾಳಿ: ಮೂರೇ ಸೆಕೆಂಡುಗಳಲ್ಲಿ ಕಟ್ಟಡ ಧ್ವಂಸ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ನಿವಾಸದ ಮೇಲೆ ಹಮಾಸ್‌ ಡ್ರೋನ್‌ ದಾಳಿ ನಡೆಸಿದ ಬಳಿಕ ಇಸ್ರೇಲ್‌ ತನ್ನ ದಾಳಿಯ ತೀವ್ರತೆಯನ್ನು ಹೆಚ್ಚು ಮಾಡಿದ್ದು, ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ (Israeli Airstrike) ಬೈರೂತ್‌ನ ಬೃಹತ್‌ ಕಟ್ಟಡಗಳು ಸೆಕೆಂಡುಗಳಲ್ಲಿ ನೆಲೆ ಕಚ್ಚಿವೆ.

ಇಸ್ರೇಲಿ ಮಿಲಿಟರಿ ವಕ್ತಾರ ಅವಿಚಾಯ್‌ ಅಡ್ರೇ ಅವರು ಎಚ್ಚರಿಕೆ ನೀಡಿದ 40 ನಿಮಿಷಗಳ ಬಳಿಕ ದಾಳಿ ಸಂಭವಿಸಿದೆ. ದಾಳಿಗೆ ಒಳಗಾದ ಎರಡು ಬೃಹತ್‌ ಕಟ್ಟಡಗಳಲ್ಲಿ ಹಿಜ್ಬುಲ್ಲಾ ಸೌಲಭ್ಯಗಳನ್ನು ಅಡಗಿಸಿಡಲಾಗಿತ್ತು. ಅಲ್ಲದೇ ಲೆಬನಾನ್‌ನಿಂದ (Lebanon) ಸ್ಥಳಾಂತರಗೊಂಡಿದ್ದ ಕುಟುಂಬಗಳೂ ಆಶ್ರಯ ಪಡೆದಿದ್ದವು ಎಂದು ವರದಿಗಳು ತಿಳಿಸಿವೆ.

https://x.com/Zayn_Fxdose/status/1848815071339708679?ref_src=twsrc%5Etfw%7Ctwcamp%5Etweetembed%7Ctwterm%5E1848815071339708679%7Ctwgr%5E3df799efc39e33667b23d2d39da44442f4e15575%7Ctwcon%5Es1_&ref_url=https%3A%2F%2Fpublictv.in%2Fvideo-beirut-residential-building-collapses-like-pack-of-cards-after-israeli-airstrike%2F

ಇಸ್ರೇಲ್‌ ವಾಯುದಾಳಿಯ 32 ಸೆಕೆಂಡುಗಳ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಉದ್ಯಾನ ಪಕ್ಕದಲ್ಲೇ ನಿರ್ಮಾಣಗೊಂಡಿದ್ದ ದೈತ್ಯ ಕಟ್ಟಡ ಮಿಸೈಲ್‌ ಬೀಳುತ್ತಿದ್ದಂತೆ ಕೇವಲ 3 ಸೆಕೆಂಡುಗಳಲ್ಲೇ ಧ್ವಂಸವಾಗಿದೆ. ಸದ್ಯ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!