ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್(Israel) ಮತ್ತು ಹಮಾಸ್(Hamas) ನಡುವೆ ನಡೆಯುತ್ತಿರುವ ಯುದ್ಧದ ಮುಂದುವರಿದಿದ್ದು, ಜೆರುಸಲೆಮ್ ಮೇಲೆ ರಾಕೆಟ್ ದಾಳಿ ನಡೆದ ಸಂದರ್ಭ ಭಯೋತ್ಪಾದಕರು ಎಂದು ತಪ್ಪಾಗಿ ಭಾವಿಸಿ ಮೂವರು ಒತ್ತೆಯಾಳುಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ (Israel Army) ತಿಳಿಸಿದೆ.
ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಈ ಮಾಹಿತಿ ನೀಡಿದ್ದು, ಇಸ್ರೇಲಿ ಸೈನಿಕರು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ತಮಗೆ ಅಪಾಯ ಎಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇದು ನಮಗೆಲ್ಲರಿಗೂ ದುಃಖಕರ ಮತ್ತು ನೋವಿನ ಘಟನೆಯಾಗಿದೆ ಮತ್ತು ಈ ಘಟನೆಗೆ ಎಲ್ಲದಕ್ಕೂ IDF ಕಾರಣವಾಗಿದೆ ಎಂದು ಹಗರಿ ಹೇಳಿದ್ದಾರೆ.
ಹಮಾಸ್ ಬಂಡುಕೋರರ ಗುಂಪನ್ನು ನಾಶಮಾಡಲು ಮತ್ತು ಉಗ್ರಗಾಮಿಗಳಿಂದ ಅಪಹರಿಸಲ್ಪಟ್ಟ ಅಂದಾಜು 250 ಒತ್ತೆಯಾಳುಗಳನ್ನು ವಾಪಸ್ ಕರೆತರುವುದಾಗಿ ಪ್ರತಿಜ್ಞೆ ಮಾಡಿದ ಇಸ್ರೇಲ್, ಭಾರಿ ಆಕ್ರಮಣ ನಡೆಸಿದೆ. ಇಸ್ರೇಲ್ ಸೇನೆ ಮುತ್ತಿಗೆ ಹಾಕಿದ ಹೆಚ್ಚಿನ ಪ್ರದೇಶವನ್ನು ನಾಶಮಾಡಿದೆ.
ಹಮಾಸ್ (Hamas) ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಯುದ್ಧ ಪ್ರಾರಂಭವಾಯಿತು. ಇಲ್ಲಿಯವರೆಗೆ ಇಸ್ರೇಲಿ ಅಧಿಕಾರಿಗಳು ಸುಮಾರು 1,200 ಜನರನ್ನು ಹತ್ಯೆ ಮಾಡಿದ್ದಾರೆ. ಅವರ ಪೈಕಿ ಹೆಚ್ಚಿನವರು ನಾಗರಿಕರೇ ಆಗಿದ್ದಾರೆ ಎಂದು ತಿಳಿದುಬಂದಿದೆ.