ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಬಳಿಕ ಇರಾನ್‌ನ ಶಕ್ತಿಶಾಲಿ ಫೋರ್ಡೋ ಪರಮಾಣು ಘಟಕದ ಮೇಲೆ ಇಸ್ರೇಲ್ ಕೂಡ ದಾಳಿ ನಡೆಸಿದೆ.
ಫೋರ್ಡೋ ಮೇಲೆ ಇಸ್ರೇಲ್ ದಾಳಿ ನಡೆಸಿರುವುದಾಗಿ ಇರಾನ್‌ನ (Iran) ತಸ್ನಿಮ್ ಸುದ್ದಿಸಂಸ್ಥೆ ವರದಿ ಮಾಡಿದೆ. ಬಳಿಕ ಇಸ್ರೇಲ್‌ನ ರಕ್ಷಣಾ ಸಚಿವ ಕಾಟ್ಜ್ ದಾಳಿಯನ್ನು ಖಚಿತಪಡಿಸಿದ್ದಾರೆ. ನಮ್ಮ ರಕ್ಷಣಾಪಡೆಗಳು ಟೆಹ್ರಾನ್ ಮಧ್ಯಭಾಗದ ಗುರಿಗಳ ಮೇಲೆ ನಿಖರ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.
ಸದ್ಯಕ್ಕೆ ಸ್ಥಳದಲ್ಲಿ ಹಾನಿಯ ಬಗ್ಗೆ ತಕ್ಷಣದ ಮಾಹಿತಿ ಇಲ್ಲ. ಈ ನಡುವೆ ಉತ್ತರ ಟೆಹ್ರಾನ್‌ನಲ್ಲೂ ಭಾರೀ ಸ್ಫೋಟಗಳು ಸಂಭವಿಸಿದೆ.