ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆನಿನ್ ನಗರದ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ಡ್ರೋನ್ ದಾಳಿಯಲ್ಲಿ ಎಂಟು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದರು. ಕಿಕ್ಕಿರಿದು ತುಂಬಿದ್ದ ನಿರಾಶ್ರಿತರ ಶಿಬಿರದಲ್ಲಿ ಉಗ್ರರು ಮತ್ತು ಇಸ್ರೇಲಿ ಪಡೆಗಳ ನಡುವೆ ಘರ್ಷಣೆ ನಡೆದಿದೆ.
ದಿನವಿಡೀ ಅವರ ನಡುವೆ ಗುಂಡಿನ ಚಕಮಕಿ, ಸ್ಫೋಟಗಳು ನಡೆಸಿದ್ದು, ಇಸ್ರೇಲ್‌ನ ಆರು ಡ್ರೋನ್‌ಗಳು 14 ಸಾವಿರ ಜನರಿದ್ದ ನಿರಾಶ್ರಿತರ ಶಿಬಿರಗಳ ಮೇಲೆದಾಳಿ ಮಾಡಿವೆ.
ಪ್ಯಾಲೆಸ್ತೀನಿಯರು ಇಸ್ರೇಲಿಗಳ ವಿರುದ್ಧ ಮಾರಣಾಂತಿಕ ದಾಳಿ ನಡೆಸುತ್ತಿದ್ದಾರೆ. ಜೆನಿನ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 8 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವರು ಖಚಿತಪಡಿಸಿದ್ದಾರೆ. ಇಸ್ರೇಲಿ ಶಸ್ತ್ರಸಜ್ಜಿತ ಬುಲ್ಡೋಜರ್‌ಗಳು ಶಿಬಿರದಲ್ಲಿ ಗುಪ್ತ ಸ್ಫೋಟಕ ಸಾಧನಗಳನ್ನು ಅಗೆದು ಹಾಕಿದವು. ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಇಸ್ರೇಲ್ ಜೊತೆಗಿನ ಸಂಬಂಧವನ್ನು ಕಡಿತಗೊಳಿಸುತ್ತಿರುವುದಾಗಿ ಹೇಳಿದ್ದಾರೆ.