ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾಲೆಸ್ತೀನ್ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಕಟ್ಟಡದ ಮೇಲೆ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಬಾಂಬ್ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿದೆ.
ಇಸ್ರೇಲ್ ಸ್ಪೋಟ ಸಂಭವಿಸುವ ಮೊದಲು ವಿಶ್ವವಿದ್ಯಾನಿಲಯದ ಕಟ್ಟಡದಂತೆ ಗೋಚರಿಸುವ ವಿಡಿಯೋವನ್ನು ಚಿತ್ರಿಸುತ್ತದೆ. ನಂತರ, ಬಾಂಬ್‌ಗಳನ್ನು ಒಳಗೆ ಅಡಗಿಸಿಡಲಾಗಿದ್ದು, ಬಳಿಕ ಸ್ಫೋಟಗೊಳಿಸುತ್ತವೆ. ಹಾಗೂ, ಎಲ್ಲ ದಿಕ್ಕುಗಳಲ್ಲಿ ಆಘಾತ ತರಂಗಗಳು ಸಂಭವಿಸಿದೆ. ಇನ್ನು, ಈ ವಿಡಿಯೋ ಬಗ್ಗೆ ಅಮೆರಿಕ ಪ್ರತಿಕ್ರಿಯೆ ನೀಡಿದ್ದು, ಮಾಹಿತಿ ಕೊರತೆ ಇದೆ ಎಂದು ಪ್ರತಿಕ್ರಿಯೆ ನೀಡಿದೆ. ಅಲ್ಲದೆ, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಡೇವಿಡ್ ಮಿಲ್ಲರ್ ಈ ಸಂಬಂಧ ಸ್ಪಷ್ಟೀಕರಣ ಕೋರಿದ್ದಾರೆ.
Birzeit University condemns the brutal assault and bombing of @Al-Israa University campus by the Israeli occupation south of #Gaza city, this occurred after seventy days of the occupation occupying the campus; turning it into their base, and military barracks for their forces pic.twitter.com/vot9s1z3tz
— Birzeit University (@BirzeitU) January 18, 2024
ದಕ್ಷಿಣ ಗಾಜಾದ ಪ್ರಮುಖ ನಗರವಾದ ಖಾನ್ ಯುನಿಸ್‌ನಲ್ಲಿನ ಸಾಕ್ಷಿಗಳು ಗುಂಡಿನ ದಾಳಿ ಮತ್ತು ವೈಮಾನಿಕ ದಾಳಿಗಳ ಬಗ್ಗೆ ವರದಿ ಮಾಡಿದ್ದಾರೆ. ಈ ಮಧ್ಯೆ, ಇಸ್ರೇಲಿ ಸೇನೆಯು ಈ ಪ್ರದೇಶವನ್ನು ಗುರಿಯಾಗಿಟ್ಟುಕೊಂಡು, ಹಮಾಸ್‌ನ ಸದಸ್ಯರು ಮತ್ತು ನಾಯಕರ ಭದ್ರಕೋಟೆ ಎಂದು ಹೇಳಿಕೊಂಡಿದೆ.
ಗಾಜಾದ ಆರೋಗ್ಯ ಸಚಿವಾಲಯವು ರಾತ್ರಿಯಲ್ಲಿ 77 ಸಾವುಗಳನ್ನು ದೃಢಪಡಿಸಿದೆ. ಇನ್ನು, ಇಸ್ರೇಲಿ ಮಿಲಿಟರಿ ಡಜನ್‌ಗಟ್ಟಲೆ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿರೋದಾಗಿ ಹೇಳಿಕೊಂಡಿದೆ ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ.