ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್‌ ದಾಳಿ ನಡೆಸಿಲ್ಲ: ಜೋ ಬೈಡೆನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ (Israel) ಮತ್ತು ಹಮಾಸ್ ಉಗ್ರರ (Hamas Militants) ನಡುವಿನ ಕದನ ಮಧ್ಯೆ ಭೀಕರ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Biden) ಬುಧವಾರ ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ.

ಬೈಡೆನ್ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರನ್ನು ಅಪ್ಪಿಕೊಂಡು ಸ್ವಾಗತಿಸಿದರು. ಬಳಿಕ ಗಾಜಾ ಆಸ್ಪತ್ರೆಯ (Gaza Hospital) ಮೇಲೆ ನಡೆದ ರಾಕೆಟ್ ದಾಳಿಯ ಕುರಿತು ನೆತನ್ಯಾಹು ಮತ್ತು ಬೈಡೆನ್ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಗಾಜಾ ಆಸ್ಪತ್ರೆಯ ಮೇಲೆ ರಾಕೆಟ್ ದಾಳಿ ಕುರಿತು ಮಾತನಾಡಿದ ಬೈಡೆನ್, ಗಾಜಾದ ಅಲ್-ಅಹ್ಲಿ ಆಸ್ಪತ್ರೆಯಲ್ಲಿ ನಡೆದ ದಾಳಿ ಗಜಾನ್ ಭಯೋತ್ಪಾದಕ ಗುಂಪುಗಳಿಂದ ಸಂಭವಿಸಿದೆ ಎನಿಸುತ್ತಿದೆ. ಈ ದಾಳಿಯನ್ನು ಇಸ್ರೇಲ್ ಮಾಡಿಲ್ಲ ಎಂದು ಹೇಳಿದ್ದಾರೆ.

ಗಾಜಾದ ಆಸ್ಪತ್ರೆಯಲ್ಲಿ ನಡೆದ ದಾಳಿಯಿಂದಾಗಿ ನಾನು ತೀವ್ರ ದುಃಖಿತನಾಗಿದ್ದೇನೆ. ಅಲ್ಲದೇ ಆಕ್ರೋಶಗೊಂಡಿದ್ದೇನೆ. ನಾನು ನೋಡಿದ ಆಧಾರದ ಮೇಲೆ ಈ ದಾಳಿಯನ್ನು ಇಸ್ರೇಲ್ ಮಾಡಿಲ್ಲ. ಈ ಕೃತ್ಯವನ್ನು ಬೇರೆ ತಂಡ ಮಾಡಿದೆ ಎಂದಿದ್ದಾರೆ.

ನಾನು ಇಲ್ಲಿಗೆ ಭೇಟಿ ನೀಡಲು ಒಂದು ಸಣ್ಣ ಕಾರಣವಿದೆ. ಇಸ್ರೇಲ್ ದೇಶದ ಜನರು ಮತ್ತು ವಿಶ್ವದ ಜನರು ಅಮೆರಿಕ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ನಾನು ಬಯಸುತ್ತೇನೆ. 31 ಅಮೆರಿಕನ್ನರು ಸೇರಿದಂತೆ 1,300 ಜನರನ್ನು ಹಮಾಸ್ ಹತ್ಯೆ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here