ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಮಾಸ್ ಭಯೋತ್ಪಾದನಾ ದಾಳಿಯಲ್ಲಿ ಗಾಯಗೊಂಡವರ ಸಂಖ್ಯೆ 1,864 ಕ್ಕೆ ಏರಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಅವರಲ್ಲಿ 326 ಮಂದಿ ಗಂಭೀರವಾಗಿ ಗಾಯಗೊಂಡಿದ್ದರೆ, 359 ಮಂದಿ ಸಣ್ಣ-ಪುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿದ್ದಾರೆ. 19ಜನರ ಸ್ಥಿತಿ ಶೋಚನೀಯವಾಗಿದೆ ಎಂದು ವಿವರಿಸಿದರು.
ಉಳಿದ ಗಾಯಾಳುಗಳನ್ನು ವೈದ್ಯಕೀಯ ಸಿಬ್ಬಂದಿ ಗಮನಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಹಮಾಸ್ ಉಗ್ರರು ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಒತ್ತೆಯಾಳಾಗಿ ಮಾಡಿಕೊಂಡಿದ್ದಾರೆ.
ಪ್ಯಾಲೆಸ್ಟೇನ್ ವಿರುದ್ಧ ಪ್ರತಿದಾಳಿ ನಡೆಸಿದ ಇಸ್ರೇಲ್ “ಆಪರೇಷನ್ ಸ್ವೋರ್ಡ್ಸ್ ಆಫ್ ಐರನ್” ಅನ್ನು ಪ್ರಾರಂಭಿಸಿತು, ಗಾಜಾ ಪಟ್ಟಿಯಲ್ಲಿರುವ ಹಲವಾರು ಶಂಕಿತ ಹಮಾಸ್ ಅಡಗುತಾಣಗಳನ್ನು ಹೊಡೆದಿದೆ.