ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್‌ನ ರಕ್ಷಣಾ ಕೇಂದ್ರಗಳು, ತೈಲ ಘಟಕಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿಯನ್ನು ತೀವ್ರಗೊಳಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ದಾಳಿ ನಡೆಸಿದೆ. ಹೋರಾಟ ನಿಲ್ಲಿಸುವಂತೆ ಕರೆಗಳು ಬಂದಿದ್ದರೂ, ಎರಡೂ ದೇಶಗಳು ಹಿಂದೆ ಸರಿದಿಲ್ಲ ಹೀಗಾಗಿ ಸಂಘರ್ಷ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಇಸ್ರೇಲ್ ತನ್ನ ತೈಲ ಸಂಸ್ಕರಣಾಗಾರಗಳನ್ನು ಹೊಡೆದುರುಳಿಸಿದೆ, ತನ್ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್‌ನ ಗುಪ್ತಚರ ಮುಖ್ಯಸ್ಥ ಮತ್ತು ಇತರ ಇಬ್ಬರು ಜನರಲ್‌ಗಳನ್ನು ಕೊಂದಿದೆ. ಜನಸಂಖ್ಯಾ ಕೇಂದ್ರಗಳ ಮೇಲೆ ತೀವ್ರವಾದ ವೈಮಾನಿಕ ದಾಳಿ ನಡೆಸಿದೆ ಎಂದು ಇರಾನ್ ಹೇಳಿದೆ
ಟೆಹರಾನ್‌ನಲ್ಲಿರುವ ಇರಾನ್ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಮೇಲೆ ಇಸ್ರೇಲ್ ಭಾನುವಾರ ಕ್ಷಿಪಣಿ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್‌ನ ಕ್ಷಿಪಣಿಗಳು, ಇಸ್ರೇಲ್ ವಾಯುರಕ್ಷಣಾ ವ್ಯವಸ್ಥೆಯನ್ನು ಭೇದಿಸಿ, ಹಲವು ಕಟ್ಟಡಗಳನ್ನು ನಾಶಗೊಳಿಸಿವೆ.
ಸೋಮವಾರ ಬೆಳಿಗ್ಗೆ ಟೆಹರಾನ್‌ನ ವಿವಿಧೆಡೆಯೂ ಸ್ಫೋಟಗಳು ಸಂಭವಿಸಿವೆ. ನಾಲ್ಕು ದಿನಗಳ ಸಂಘರ್ಷದಲ್ಲಿ ದೇಶದಲ್ಲಿ 224 ಮಂದಿ ಮೃತಪಟ್ಟಿದ್ದು, 1,277ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ವಿಶ್ವಸಂಸ್ಥೆಯ ರಾಯಭಾರಿ ತಿಳಿಸಿದ್ದಾರೆ.