ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದು ತೈಲ ಡಿಪೋ ಮೇಲೆ ಇಸ್ರೇಲ್ ದಾಳಿ ನಡೆಸಿದೆ.
ಟೆಹ್ರಾನ್‌ನಲ್ಲಿ ಸ್ಥಳೀಯ ಸಮಯ ನಸುಕಿನ ಜಾವ 2:30 ರ ಸುಮಾರಿಗೆ ಸ್ಫೋಟಗಳ ಶಬ್ದ ಕೇಳಿಬಂದವು ಎನ್ನಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ದೃಶ್ಯಗಳು, ನಗರದ ಮೇಲೆ ದಟ್ಟವಾದ ಹೊಗೆ ಜೊತೆ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ತೋರಿಸಿದೆ.
ಇಸ್ರೇಲಿ ದಾಳಿಗಳಿಗೆ ಪ್ರತಿಕ್ರಿಯೆಯಾಗಿ, ಇಸ್ರೇಲಿ ಫೈಟರ್ ಜೆಟ್‌ಗಳಿಗೆ ಇಂಧನ ತುಂಬಲು ಬಳಸುವ ಸ್ಥಳಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಇಂದು ಮುಂಜಾನೆ ಇರಾನ್ ಘೋಷಿಸಿದೆ.