ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಹಾಗೂ ಇರಾನ್ ಯುದ್ಧದ ಕಾರ್ಮೋಡವಿದ್ದು, ಈ ಹಿನ್ನೆಲೆ ಇರಾನ್, ಸೌದಿ ಅರೇಬಿಯಾ, ಯುಎಇ ಸೇರಿದಂತೆ 11 ದೇಶಗಳ ವಾಯು ಪ್ರದೇಶವನ್ನು ಮಾರ್ಚ್ 2 ರವರೆಗೆ ಬಳಸದಂತೆ DGCA ಭಾರತದ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದೆ.
ಇರಾನ್, ಇಸ್ರೇಲ್, ಲೆಬನಾನ್, ಯುಎಇ, ಸೌದಿ ಅರೇಬಿಯಾ, ಬಹ್ರೇನ್, ಓಮನ್, ಇರಾಕ್, ಜೋರ್ಡಾನ್, ಕುವೈತ್ ಮತ್ತು ಕತಾರ್ ನಲ್ಲಿನ ವಾಯು ಪ್ರದೇಶವನ್ನು ಬಳಸದಂತೆ ಸೂಚಿಸಲಾಗಿದೆ.
ಈಗಾಗಲೇ ಅನೇಕ ವಾಯುಪ್ರದೇಶಗಳನ್ನು ಮುಚ್ಚಲಾಗಿದ್ದು, ಭಾರತೀಯ ವಿಮಾನಯಾನ ಸಂಸ್ಥೆಗಳು ಮಧ್ಯಪ್ರಾಚ್ಯಕ್ಕೆ ತಮ್ಮ ಸೇವೆಗಳನ್ನು ಸ್ಥಗಿತಗೊಳಿಸಿವೆ. ಇದರ ನಡುವೆ ಅಂತಾರಾಷ್ಟ್ರೀಯ ಸುರಕ್ಷತಾ ಮಾನದಂಡಗಳು ಮತ್ತು ಯುರೋಪಿಯನ್ ಯೂನಿಯನ್ ಏವಿಯೇಷನ್ ಸೇಫ್ಟಿ ಏಜೆನ್ಸಿಯ ಸಂಘರ್ಷ ವಲಯ ಮಾಹಿತಿ ಬುಲೆಟಿನ್ (CZIB) ಗೆ ಅನುಗುಣವಾಗಿ ಈ ಸಲಹೆಯನ್ನು ನೀಡಲಾಗಿದೆ .
ತಕ್ಷಣದಿಂದಲೇ ಈ ಸಲಹೆಯು ಜಾರಿಗೆ ಬಂದಿದ್ದು, ಮುಂದಿನ ಬೆಳವಣಿಗೆಗಳಿಂದ ಪರಿಶೀಲಿಸದಿದ್ದರೆ ಅಥವಾ ಅದನ್ನು ರದ್ದುಗೊಳಿಸದ ಹೊರತು ಮಾರ್ಚ್ 02, 2026 ರವರೆಗೆ ಮಾನ್ಯವಾಗಿರುತ್ತದೆ ಎಂದು DGCA ತಿಳಿಸಿದೆ.



