ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಗಾಜಾದ ಮೇಲೆ ಮತ್ತೆ ಇಸ್ರೇಲ್ ದಾಳಿ ನಡೆಸಿದ್ದು, ವಸತಿ ಕಟ್ಟಡದ ಮೇಲೆ ಭಾರೀ ದಾಳಿ ನಡೆಸಿ ಸುಮಾರು 23 ಜನರು ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಎಂಟು ಮಹಿಳೆಯರು ಮತ್ತು ಎಂಟು ಮಕ್ಕಳು ಸೇರಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಈ ದಾಳಿ ಗಾಜಾ ನಗರದ ಶಿಜಯ್ಯ ಪ್ರದೇಶದಲ್ಲಿ ನಡೆದಿದೆ. ಈ ದಾಳಿಯ ಬಗ್ಗೆ ಇಸ್ರೇಲಿ ಸೇನೆಯು, ಶಿಜಯ್ಯದಿಂದ ದಾಳಿ ನಡೆಸುತ್ತಿದ್ದ ಹಿರಿಯ ಹಮಾಸ್ ಭಯೋತ್ಪಾದಕನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಹೇಳಿದೆ.
ಇಸ್ರೇಲಿ ವಾಯುದಾಳಿಯ ನಂತರ, ಗಾಜಾ ನಗರದ ಶಿಜಯ್ಯ ನೆರೆಹೊರೆಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ತುರ್ತು ಸೇವೆ ತಿಳಿಸಿದೆ.ಇಸ್ರೇಲ್ ಗಾಜಾದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಶಿಜಯ್ಯದಲ್ಲಿ ವ್ಯಾಪಕ ಸ್ಥಳಾಂತರಿಸುವ ಆದೇಶಗಳನ್ನು ಹೊರಡಿಸಿದೆ.