ಇಸ್ರೇಲ್– ಪ್ಯಾಲೆಸ್ಟೈನ್ ಸಂಘರ್ಷ: ಹಮಾಸ್ ವಶದಲ್ಲಿ 17 ಮಂದಿ ನೇಪಾಳಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದ್ದು , ಇತ್ತ ಇಸ್ರೇಲ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ಕನಿಷ್ಠ 17 ಮಂದಿ ನೇಪಾಳ ವಿದ್ಯಾರ್ಥಿಗಳು ಹಮಾಸ್ ಸೆರೆಗೆ ಸಿಲುಕಿದ್ದಾರೆ.

ಹರ್ಜ್ಲಿಯಾದಲ್ಲಿ ಇಸ್ರೇಲ್ ಸರ್ಕಾರದ “ಲರ್ನ್&ಅರ್ನ್ (Learn and Earn)” ಕಾರ್ಯಕ್ರಮದಲ್ಲಿ ವ್ಯಾಸಂಗ ಮಾಡುತ್ತಿದ್ದ 7 ನೇಪಾಳಿ ವಿದ್ಯಾರ್ಥಿಗಳು ಘಟನೆಯಲ್ಲಿ ಗಾಯಗೊಂಡಿದ್ದಾರೆ, ಜೊತೆಗೆ ದಕ್ಷಿಣ ಇಸ್ರೇಲ್ ನ ಅಲ್ಯುಮಿಮ್ನಲ್ಲಿರುವ ಕೃಷಿ ಫಾರ್ಮ್ನಲ್ಲಿ 10 ನೇಪಾಳಿ ವಿದ್ಯಾರ್ಥಿಗಳನ್ನು ಹಮಾಸ್ ಪಡೆಗಳು ಸೆರೆಯಲ್ಲಿ ಇರಿಸಿಕೊಂಡಿವೆ ಎಂದು ಇಸ್ರೇಲ್ ನಲ್ಲಿರುವ ನೇಪಾಳದ ರಾಯಭಾರಿ ಕಾಂತಾ ರಿಜಾಲ್ ಹೇಳಿದ್ದಾರೆ.

ನೇಪಾಳದ ರಾಯಭಾರಿ ಪ್ರಕಾರ, ಇಸ್ರೇಲ್ನ ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ತಂಡಗಳಿಗೆ ಪರಿಸ್ಥಿತಿಯ ಬಗ್ಗೆ ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!