ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿರಿಯ ಹಮಾಸ್ ನಾಯಕ ಮೊಹಮ್ಮದ್ ಸಿನ್ವಾರ್ ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೃಢಪಡಿಸಿದ್ದಾರೆ.
ಇಸ್ರೇಲ್ ಪಡೆಗಳು ಹತ್ಯೆ ಮಾಡಿದ ಹಮಾಸ್ ವ್ಯಕ್ತಿಗಳ ಪಟ್ಟಿಯಲ್ಲಿ 2023ರ ಅಕ್ಟೋಬರ್ 7ರಂದು ನಡೆದ ದಾಳಿಯ ಪ್ರಮುಖ ಸೂತ್ರಧಾರ ಸಿನ್ವಾರ್ ಕೂಡ ಇದ್ದಾರೆ.
ಈತ ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಸೂತ್ರಧಾರಿ ಎಂದು ನಂಬಲಾದ ಹಮಾಸ್‌ನ ಉನ್ನತ ಕಮಾಂಡರ್ ಯಾಹ್ಯಾ ಸಿನ್ವಾರ್ ಅವರ ಸಹೋದರ. ಹಮಾಸ್‌ನ ಉನ್ನತ ಕಮಾಂಡರ್ ಮತ್ತು ಹತ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಅವರ ಕಿರಿಯ ಸಹೋದರ ಮುಹಮ್ಮದ್ ಸಿನ್ವಾರ್ ಅವರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಭಯೋತ್ಪಾದಕರನ್ನು ನ್ಯೂಸ್ ನಲ್ಲಿ ಬಹುವಚನದಲ್ಲಿ ಸಂಬೋಧಿಸುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ
ಉದಾ :- ಅವರ ಸಹೋದರ.
ಇದ್ದಾರೆ.
ಅವರ ಹಿರಿಯ ಸಹೋದರ.
ಅವರನ್ನು ಕೊಲ್ಲಲಾಗಿದೆ.
ಇಂತಹ ಪದಗಳು ನ್ಯೂಸ್ನಲ್ಲಿ ಅಪ್ರಸ್ತುತ. ಸರಿಪಡಿಸುತಿರೆಂದು ನಂಬುತ್ತೇನೆ