ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲಿ ವಾಯುಪಡೆ ಟೆಹ್ರಾನ್ನಲ್ಲಿರುವ ಇರಾನ್ ಸ್ಟೇಟ್ ಬ್ರಾಡ್ಕಾಸ್ಟರ್ ಏಜೆನ್ಸಿ IRIB ಕಚೇರಿ ಮೇಲೆ ವೈಮಾನಿಕ ದಾಳಿ ನಡೆಸಿದೆ. ನಿರೂಪಕಿ ಸುದ್ದಿ ಓದುತ್ತಿರುವಾಗಲೇ ಕಚೇರಿ ಮೇಲೆ ದಾಳಿ ನಡೆದಿದೆ.
ಈ ದಾಳಿಯು IRIB ಪ್ರಸಾರಕ್ಕೆ ಅಡ್ಡಿಯುಂಟು ಮಾಡಿತ್ತು. ಈ ವಿಡಿಯೋದಲ್ಲಿ ಕಚೇರಿಗೆ ಮೇಲೆ ನಡೆದ ದಾಳಿಯನ್ನು ಕಾಣಬಹುದು. ಇಸ್ರೇಲ್ ರಕ್ಷಣಾ ಪಡೆ ಈ ಹಿಂದೆ IRIB ಪ್ರಧಾನ ಕಚೇರಿಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ತುರ್ತು ಎಚ್ಚರಿಕೆಯನ್ನು ನೀಡಿತ್ತು.
ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಈ ದಾಳಿ ನಡೆದಿದೆ. ವರದಿಗಳ ಪ್ರಕಾರ, ಉದ್ವಿಗ್ನತೆಯನ್ನು ಕಡಿಮೆ ಮಾಡಲು ಶೀಘ್ರದಲ್ಲೇ ಮಾತುಕತೆಗಳನ್ನು ಪುನರಾರಂಭಿಸುವ ಬಯಕೆಯನ್ನು ಇರಾನ್ ವ್ಯಕ್ತಪಡಿಸಿದೆ.
View this post on Instagram