ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 14 ಮಕ್ಕಳು, ಮೂವರು ಪತ್ರಕರ್ತರು ಸಹಿತ 38 ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಾಜಾ ಮೇಲೆ ಇಸ್ರೇಲ್​ ಮತ್ತೆ ವೈಮಾನಿಕ ದಾಳಿ ನಡೆಸಿದ್ದು, ಖಾನ್ ಯೂನಿಸ್‌ನಲ್ಲಿನ ಬಹುಮಹಡಿ ವಸತಿ ಕಟ್ಟಡಗಳ ಮೇಲೆ ಶುಕ್ರವಾರ ನಡೆದ ದಾಳಿಯಲ್ಲಿ 14 ಮಕ್ಕಳು ಸೇರಿದಂತೆ ಕನಿಷ್ಠ 38 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ.

ಮೃತಪಟ್ಟ 14 ಮಕ್ಕಳ ಪೈಕಿ 13 ಮಕ್ಕಳು ಒಂದೇ ಕುಟುಂಬದವರಾಗಿದ್ದು, ಇಸ್ರೇಲಿ ಕ್ಷಿಪಣಿಗಳಿಂದ ಹರಬಂದ ಹೊಗೆಯಿಂದ ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಲ್ ಜಜೀರಾ ತಿಳಿಸಿದೆ. ಗಾಜಾ ಆರೋಗ್ಯ ಅಧಿಕಾರಿಗಳು ಈ ಸಾವುಗಳನ್ನು ಖಚಿತಪಡಿಸಿದ್ದಾರೆ.

ಬ್ಲಿಂಕೆನ್ ಶುಕ್ರವಾರ ಲಂಡನ್‌ನಲ್ಲಿ ಅರಬ್ ನಾಯಕರನ್ನು ಭೇಟಿಯಾಗುವ ಕೆಲವೇ ಗಂಟೆಗಳ ಮುನ್ನ ಇಸ್ರೇಲ್ ಸೇನೆ, ಆಗ್ನೇಯ ಲೆಬನಾನ್‌ನಲ್ಲಿ ಪತ್ರಕರ್ತರು ತಂಗಿದ್ದ ಅತಿಥಿಗೃಹದ ಮೇಲೆ ದಾಳಿ ನಡೆಸಿದೆ. ಈ ದಾಳಿಯಲ್ಲಿ ಮೂವರು ಪತ್ರಕರ್ತರು ಸಾವನ್ನಪ್ಪಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!