ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಇರಾನ್ ಮೇಲೆ ನೇರ ವೈಮಾನಿಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಸೇನೆಯು ದೃಢಪಡಿಸಿದೆ.
ಇರಾನಿನ ರಾಜಧಾನಿ ಟೆಹ್ರಾನ್ ಮತ್ತು ಹತ್ತಿರದ ಪ್ರದೇಶಗಳ ಮೇಲೆ ಕನಿಷ್ಠ ಮೂರು ಸುತ್ತಿನ ದಾಳಿಗಳನ್ನು ನಡೆಸಲಾಯಿತು.ಇಸ್ರೇಲ್ ನಡೆಸಿರುವ ಸೇಡಿನ ದಾಳಿಯಲ್ಲಿ ಉಂಟಾಗಿರುವ ಹಾನಿ ಸೀಮಿತವಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ಆದರೆ ಇರಾನ್ ವಾಯು ಪ್ರದೇಶದಲ್ಲಿ ತನಗೆ ಈಗ ವ್ಯಾಪಕ ಸ್ವಾತಂತ್ರ್ಯ ದೊರಕಿದೆ ಎಂದು ಇಸ್ರೇಲ್ ಪ್ರತಿಪಾದಿಸಿದೆ.
ಇಸ್ರೇಲ್‌ನ ಮೇಲೆ ನಡೆದ ಟೆಹ್ರಾನ್‌ನ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಇರಾನ್ನ ಮಿಲಿಟರಿ ಗುರಿಗಳ ವಿರುದ್ಧ ದಾಳಿಗಳನ್ನು ನಡೆಸಿದೆ ಎಂದು ಹೇಳಿಕೊಂಡಿದೆ. ಟೆಹ್ರಾನ್‌ನ ದಾಳಿಯ ನಂತರ ಯುದ್ಧ ಉಲ್ಬಣಗೊಳ್ಳುವ ಆತಂಕದ ಬೆನ್ನಲ್ಲೇ ಈ ದಾಳಿ ನಡೆದಿದೆ.
ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಸುಮಾರು 200 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಲಾಯಿತು. 6 ತಿಂಗಳ ಅವಧಿಯಲ್ಲಿ ಇರಾನ್ ಇಸ್ರೇಲ್‌ನ ಮೇಲೆ ಎರಡನೇ ನೇರ ದಾಳಿ ನಡೆಸಿತ್ತು. ಇದೀಗ ಇಸ್ರೇಲ್ ರಕ್ಷಣಾ ಪಡೆಗಳು ಇರಾನ್‌ನಲ್ಲಿನ ಮಿಲಿಟರಿ ಗುರಿಗಳ ಮೇಲೆ ದಾಳಿಗಳನ್ನು ನಡೆಸುತ್ತಿದೆ.