ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ ಇಸ್ರೋ: ಉಪಗ್ರಹಗಳ ಆನ್ ಡಾಕಿಂಗ್ ಪ್ರಯೋಗ ಸಕ್ಸಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಬಾಹ್ಯಾಕಾಶದಲ್ಲಿ ಆನ್‌ ಡಾಕಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇಸ್ರೋ ಮಹತ್ವಾಕಾಂಕ್ಷಿಯ SpaDeX ಉಡಾವಣೆ ಸಂಪೂರ್ಣ ಯಶಸ್ವಿಯಾಗಿದೆ.

ಇಸ್ರೋದ ಸ್ಪೇಡೆಕ್ ಆನ್ ಡಾಕಿಂಗ್ ಪ್ರಕ್ರಿಯೆಯಲ್ಲಿ 2024 ಡಿಸೆಂಬರ್ 30 ರಂದು 2 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿತ್ತು. ಈಗ ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನು ಪರಸ್ಪರ ಬೇರ್ಪಡಿಸೋ ಮೂಲಕ ಇಸ್ರೋ ತನ್ನ ಮಿಷನ್ ಕಂಪ್ಲೀಟ್ ಮಾಡಿದೆ.

ಬಾಹ್ಯಾಕಾಶದಲ್ಲಿ ಇಸ್ರೋದ ಡಾಕಿಂಗ್, ಆನ್ ಡಾಕಿಂಗ್ ಎರಡು ಪ್ರಯೋಗ ಸಂಪೂರ್ಣ ಯಶಸ್ವಿಯಾಗಿದೆ.

ಕಳೆದ ಜನವರಿ 16ರಂದು ಇಸ್ರೋ 2 ಉಪಗ್ರಹಗಳನ್ನು ಯಶಸ್ವಿಯಾಗಿ ಜೋಡಣೆ ಮಾಡಿತ್ತು. ಡಾಕಿಂಗ್, ಆನ್ ಡಾಕಿಂಗ್ ಪ್ರಯೋಗ ಯಶಸ್ವಿ ಇಸ್ರೋ ಮುಂದಿನ ಪ್ರಯತ್ನಗಳಿಗೆ ಪೋತ್ಸಾಹ, ಪ್ರೇರಣೆ ಸಿಗುತ್ತಿದೆ. ಪ್ರಮುಖವಾಗಿ ಚಂದ್ರನ ಕುರಿತಾದ ಸಂಶೋಧನೆ ನಡೆಸಲು ಇಸ್ರೋಗೆ ಈ ಯಶಸ್ಸು ದಾರಿ ಮಾಡಿಕೊಟ್ಟಿದೆ.

https://x.com/isro/status/1900100280345321521?ref_src=twsrc%5Etfw%7Ctwcamp%5Etweetembed%7Ctwterm%5E1900100280345321521%7Ctwgr%5E2be9ea9ae1ed532e30bf212b499ea0fce7a96a0c%7Ctwcon%5Es1_&ref_url=https%3A%2F%2Fnewsfirstlive.com%2Fisro-shares-good-news-with-another-milestone-video-in-space%2F

ಭಾರತ ಮುಂದಿನ ದಿನಗಳಲ್ಲಿ ಬಾಹ್ಯಾಕಾಶದಲ್ಲಿ ಮಾನವ ಸಹಿತ ಗಗನಯಾನ. ತನ್ನದೇ ಆದ ಸ್ವಂತ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸಲು ಮುಂದಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!