Wednesday, October 29, 2025

ಇಸ್ರೋ ನೀಡಿದೆ ಗುಡ್ ನ್ಯೂಸ್: ಡಿಸೆಂಬರ್ ಮೊದಲ ವಾರದಲ್ಲಿ ಮಾನವರಹಿತ ಗಗನಯಾನ ಪರೀಕ್ಷಾರ್ಥ ಉಡಾವಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾನವರಹಿತ ಗಗನಯಾನ ಉಡಾವಣೆಯ ಕಾರ್ಯ ಶೇಕಡ 90ರಷ್ಟು ಪೂರ್ಣಗೊಂಡಿದೆ ಎಂದು ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷಾ ಹಾರಾಟ ಮಿಷನ್ ಜಿ-1 ಡಿಸೆಂಬರ್ ಮೊದಲ ವಾರದಲ್ಲಿ ಉಡಾವಣೆಗೆ ಸಜ್ಜಾಗಿದೆ ಎಂದು ಹೇಳಿದ್ದಾರೆ.

ಎಸ್ಕೇಪ್ ಸಿಸ್ಟಮ್, ಪ್ಯಾರಾಚೂಟ್ ಮಾಡ್ಯೂಲ್, ಸಂವಹನ ವ್ಯವಸ್ಥೆಗಳು ಮತ್ತು ಇತರ ವ್ಯವಸ್ಥೆಗಳೊಂದಿಗೆ ಕ್ರ್ಯೂ ಮಾಡಲ್ ಪರೀಕ್ಷೆಗಳು ಯಶಸ್ವಿಯಾಗಿದ್ದು, ವ್ಯೋಮಮಿತ್ರ ಹ್ಯುಮನಾಯ್ಡ್ ಡಿಸೆಂಬರ್‌ನಲ್ಲಿ ಭೂಮಿಯ ಕೆಳಕಕ್ಷೆಗೆ ಹಾರಲಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಮಾನವಸಹಿತ ಗಗನಯಾನದಲ್ಲಿ ಮೂವರು ಭಾರತೀಯ ಗಗನಯಾತ್ರಿಗಳು 2027ಕ್ಕೆ ಬಾಹ್ಯಾಕಾಶಕ್ಕೆ ಪ್ರಯಾಣಿಸಲಿದ್ದಾರೆ ಎಂದು ತಿಳಿಸಿದ್ದಾರೆ.

error: Content is protected !!