ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂರ್ಯನ ಗರ್ಭದಲ್ಲಿ ಏನೆಲ್ಲಾ ಇದೆ? ಎಷ್ಟಿದೆ? ಯಾವ ವಿಸ್ಮಯಗಳಿವೆ? ಈ ಎಲ್ಲ ಪ್ರಶ್ನೆಗಳನ್ನು ಅರಿಯಲು ಹೊರಟಿರುವ ದೇಶದ ಹೆಮ್ಮೆಯ ಇಸ್ರೋ ಆದಿತ್ಯ ಮಿಷನ್ ಇದೀಗ ನಿರ್ಣಾಯಕ ಹಂತ ತಲುಪಿದೆ.
1.5 ಬಿಲಿಯನ್ ಕಿ.ಮೀ. ದೂರದಲ್ಲಿರುವ ಎಲ್-1 ಕಕ್ಷೆಗೆ ತಲುಪಲು ಇಸ್ರೋ ಇಂದು ಅಂತಿಮ ಪ್ರಯತ್ನ ನಡೆಸಲಿದೆ. ಇಂದು ಸಂಜೆ 4 ಗಂಟೆಗೆ ಎಲ್-1 ಲಾಂಗ್ರೇಜ್ ಪಾಯಿಂಟ್‌ನ್ನು ಸೌರನೌಕೆ ತಲುಪಲಿದೆ. ಇದೇ ಪಾಯಿಂಟ್‌ನಲ್ಲಿ ನೆಲೆಗೊಂಡು ಮುಂದಿನ ಐದು ವರ್ಷಗಳವರೆಗೆ ನಿರಂತರವಾಗಿ ಸೂರ್ಯನ ಅಧ್ಯಯನವನ್ನು ಮಾಡಲಿದೆ.
ಭೂಮಿಯ ಮೇಲೆ ಸೂರ್ಯನಿಂದ ಯಾವೆಲ್ಲಾ ಪರಿಣಾಮಗಳಾಗಲಿವೆ, ಹವಾಮಾನಗಳಲ್ಲಿ ಯಾವ ರೀತಿ ಬದಲಾವಣೆ ಕಾಣುತ್ತದೆ ಎನ್ನುವ ಬಗ್ಗೆ ನೌಕೆ ಅಧ್ಯಯನ ನಡೆಸಲಿದೆ. ನೌಕೆಯ ಎಂಜಿನ್ ಬರ್ನಿಂಗ್ ಮೇಲೆ ಇಸ್ರೋ ಸಂಪೂರ್ಣ ನಿಯಂತ್ರಣ ಹೊಂದಿದೆ, ಇದರಿಂದಾಗಿ ಗ್ರಹಗಳು ಸೇರಿದಂತೆ ಯಾವುದೂ ಕೂಡ ಇದರ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.
ಆದಿತ್ಯ ಎಲ್-1 ಮಿಷನ್ 2023ರ ಸೆ.22ರಂದು ಆಂಧ್ರದ ಶ್ರೀಹರಿಕೋಟಾದಿಂದ ಪಿಎಸ್‌ಎಲ್‌ವಿ ರಾಕೆಟ್ ಮೂಲಕ ನಭಕ್ಕೆ ಚಿಮ್ಮಿತ್ತು.