ಪಿಎಸ್‌ಎಲ್‌ವಿ-ಸಿ55 ರಾಕೆಟ್‌ ಮೂಲಕ ಸಿಂಗಪುರ್‌​ನ 2 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದ ಇಸ್ರೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಪಿಎಸ್‌ಎಲ್‌ವಿ-ಸಿ55 ರಾಕೆಟ್‌ ಮೂಲಕ ಸಿಂಗಾಪುರದ 2 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.

ಇಸ್ರೋದ ವಾಣಿಜ್ಯ ವಿಭಾಗದ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಯೋಜನೆಯ ಮೂಲಕ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಶನಿವಾರ ಪಿಎಸ್‌ಎಲ್‌ವಿ ಮೂಲಕ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.

22.5 ಗಂಟೆಗಳ ಕೌಂಟ್ ಡೌನ್ ನಲ್ಲಿ 44.4 ಮೀಟರ್ ಎತ್ತರದಲ್ಲಿ ರಾಕೆಟ್ ಮೊದಲ ಲಾಂಚ್ ಪ್ಯಾಡ್ ನಲ್ಲಿ ಯಶಸ್ವಿಯಾಗಿ ಚಿಮ್ಮಿದೆ. ಪಿಎಸ್ಎಲ್​ವಿ ನಿಗದಿತ ಕಕ್ಷೆಗೆ ಎರಡೂ ಉಪಗ್ರಹಗಳನ್ನು ಸೇರಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ತಿಳಿಸಿದ್ದಾರೆ.

ಪಿಎಸ್‌ಎಲ್‌ವಿಯ 57ನೇ ಉಡಾವಣೆ ಇದಾಗಿದ್ದು, ಇದರಲ್ಲಿ ಯಶಸ್ಸು ಸಾಧಿಸುವ ಮೂಲಕ ತನ್ನ ಹೆಚ್ಚಿನ ವಿಶ್ವಾಸಾರ್ಹತೆ ಮೂಡಿಸಿದೆ ಎಂದು ಮಿಷನ್ ಕಂಟ್ರೋಲ್ ಸೆಂಟರ್‌ನಿಂದ ಸೋಮನಾಥ್ ಹೇಳಿದರು.

ಇನ್ನು ಪಿಎಸ್‌ಎಲ್‌ವಿ ಕೊಂಡೊಯ್ದ 2 ಉಪಗ್ರಹಗಳ ಪೈಕಿ ಒಂದನ್ನು ಭೂವೀಕ್ಷಣೆಗೆ ಹಾಗೂ ಮತ್ತೂಂದನ್ನು ತಂತ್ರಜ್ಞಾನ ಪ್ರಾತ್ಯಕ್ಷಿಕೆ ಒದಗಿಸಲೆಂದು ಅಭಿವೃದ್ಧಿಪಡಿಸಲಾಗಿದೆ. ಇಂದು ಮುಂಬರಲಿರುವ ಚಂದ್ರಯಾನ-3 ಹಾಗೂ ಸೌರ ಮಿಷನ್‌ ಆದಿತ್ಯ ಎಲ್‌-1 ಕಾರ್ಯಾಚರಣೆಗಳಿಗೂ ಸಹಕಾರಿಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!