ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬೆಳಗ್ಗೆ ಉಡಾವಣೆಯಾಗಿದ್ದ ಇಸ್ರೋದ EOS-09 ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲವಾಗಿದೆ.
ಇಸ್ರೋದ 101ನೇ ರಾಕೆಟ್ ಉಡಾವಣೆ ಇದಾಗಿದ್ದು, ಇಂದು ಬೆಳಗ್ಗೆ 5:59ರ ಸುಮಾರಿಗೆ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ EOS-09 ರೆಡಾರ್ ಇಮೇಜಿಂಗ್ ಉಪಗ್ರಹ ನಭಕ್ಕೆ ಚಿಮ್ಮಿತ್ತು.
1,696 ಕಿಲೋಗ್ರಾಂ ತೂಕದ EOS-09 ರೆಡಾರ್ ಇಮೇಜಿಂಗ್ ಉಪಗ್ರಹವು ಭೂಮಿಯ ಮೇಲ್ಮೈಯಿಂದ 500 ಕಿಲೋಮೀಟರ್‌ಗಳಿಗಿಂತ ಹೆಚ್ಚು ಎತ್ತರದಲ್ಲಿ ನೆಲೆಗೊಳ್ಳಬೇಕಿತ್ತು. ಆದರೆ 3ನೇ ಹಂತದ ಸಂಪರ್ಕ ಕಳೆದುಕೊಂಡ ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲವಾಗಿದೆ.
ಈ ಕುರಿತು ಇಸ್ರೋ ಅಧ್ಯಕ್ಷ ವಿ.ನಾರಾಯಣ ಮಾಹಿತಿ ನೀಡಿದ್ದು, ರಾಕೆಟ್ ಉಡಾವಣೆಯ ನಾಲ್ಕು ಹಂತಗಳ ಪೈಕಿ, ಮೂರನೇ ಹಂತದಲ್ಲಿ ಒತ್ತಡ ಕುಸಿತಗೊಂಡಿದ್ದು, ಕಕ್ಷೆ ಸೇರುವಲ್ಲಿ ವಿಫಲವಾಗಿದೆ ಎಂದಿದ್ದಾರೆ.
Today 101st launch was attempted, PSLV-C61 performance was normal till 2nd stage. Due to an observation in 3rd stage, the mission could not be accomplished.
— ISRO (@isro) May 18, 2025