ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನತ್ತ ತನ್ನ ಪ್ರಯಾಣದ ಮೂರನೇ ಎರಡರಷ್ಟು ಭಾಗವನ್ನು ಮುಕ್ತಾಯ ಮಾಡಿದೆ. ಇಂದು (ಆಗಸ್ಟ್ 5) ಇಸ್ರೋ ಚಂದ್ರನ ಕಕ್ಷೆಯ ಇಂಜೆಕ್ಷನ್ (LOI) ಅನ್ನು ಯಶಸ್ವಿಯಾಗಿ ಪೂರೈಸಿದೆ.
ಈ ಕುರಿತು ಇಸ್ರೋ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದ್ದು, ‘ಇಸ್‌ಟ್ರಾಕ್, ನನಗೆ ಚಂದ್ರನ ಗ್ರ್ಯಾವಿಟಿ ಫೀಲ್ ಆದಂತೆ ಅನಿಸಿದೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರ್ಪಡೆ ಮಾಡಲಾಗಿದೆ. ಪೆರಿಲುನ್‌ನಲ್ಲಿ ರೆಟ್ರೊ-ಬರ್ನಿಂಗ್ ಅನ್ನು ಬೆಂಗಳೂರಿನ ಮಿಷನ್ ಆಪರೇಷನ್ಸ್ ಕಾಂಪ್ಲೆಕ್ಸ್, ISTRAC ನಿಂದ ಆದೇಶಿಸಲಾಯಿತು. ಮುಂದಿನ ಕಾರ್ಯಾಚರಣೆ ಆಗಸ್ಟ್ 6 ರಂದು ನಡೆಯಲಿದ್ದು, ಚಂದ್ರ ಚಂದ್ರನ ಕಕ್ಷೆಗೆ ನೌಕೆಯನ್ನು ಉಳಿಸುವ ಕಾರ್ಯ ನಡೆಯಲಿದೆ’ ಎಂದು ಹೇಳಿಕೊಂಡಿದೆ.
Chandrayaan-3 Mission:
“MOX, ISTRAC, this is Chandrayaan-3. I am feeling lunar gravity 🌖”
🙂Chandrayaan-3 has been successfully inserted into the lunar orbit.
A retro-burning at the Perilune was commanded from the Mission Operations Complex (MOX), ISTRAC, Bengaluru.
The next… pic.twitter.com/6T5acwiEGb
— ISRO (@isro) August 5, 2023
ಆಗಸ್ಟ್ 1 ರಂದು ರಾತ್ರಿ 12 ಗಂಟೆಯ ಸುಮಾರಿಗೆ ಚಂದ್ರಯಾನ-3 ನೌಕೆ ಭೂಮಿಯ ಕಕ್ಷೆಯನ್ನು ತೊರೆದು ಚಂದ್ರನ ಹೆದ್ದಾರಿಗೆ ಪ್ರವೇಶ ಪಡೆದುಕೊಂಡಿತ್ತು. ಇದನ್ನು ಟ್ರಾನ್ಸ್‌ಲುನಾರ್ ಇಂಜೆಕ್ಷನ್ ಎನ್ನುತ್ತಾರೆ. ಅಂದರೆ, ಚಂದ್ರನ ಕಕ್ಷಗೆ ಸೇರುವ ನಿಟ್ಟಿನಲ್ಲಿ ಬಾಹ್ಯಾಕಾಶ ನೌಕೆಯ ಪ್ರಯಾಣ. ಮುಂದಿನ ಹಂತವಾಗಿ ಚಂದ್ರನ ಕಕ್ಷೆಯಲ್ಲಿ ನೌಕೆ ಐದು ಸುತ್ತು ಮಾಡಲಿದ್ದು, ಆಗಸ್ಟ್ 23ರ ಸಂಜೆ ಚಂದ್ರನ ಮೇಲೆ ಇಳಿಯುವ ಕೆಲಸ ಮಾಡಲಿದೆ.