ನಟಿ ಪರ್ಲೆ ಮಾನೆ ಸಹಿತ 13 ಪ್ರಮುಖ ಯೂಟ್ಯೂಬರ್‌ಗಳ ಮನೆ, ಕಚೇರಿ ಮೇಲೆ ಐಟಿ ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆದಾಯ ತೆರಿಗೆ(ಐಟಿ) ಇಲಾಖೆಯು ಇಂದು ಕೇರಳದ ನಟಿ ಪರ್ಲೆ ಮಾನೆ ಸೇರಿದಂತೆ 13 ಪ್ರಮುಖ ಯೂಟ್ಯೂಬರ್ಗಳು ಮತ್ತು ಕಂಟೆಂಟ್ ಕ್ರಿಯೇಟರ್ಗಳ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದೆ.

ಎರ್ನಾಕುಲಂ, ಪತ್ತನಂತಿಟ್ಟ, ತ್ರಿಶೂರ್, ಅಲಪ್ಪುಳ, ಕೊಟ್ಟಾಯಂ ಮತ್ತು ಕಾಸರಗೋಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ದಾಳಿ ನಡೆದಿದ್ದು, ಐಟಿ ಅಧಿಕಾರಿಗಳ ಪ್ರಕಾರ, ಈ ಯೂಟ್ಯೂಬರ್ಗಳು ವಾರ್ಷಿಕವಾಗಿ ಅಂದಾಜು 1 ಕೋಟಿ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಆದರೆ ಅವರ ತೆರಿಗೆ ಫೈಲಿಂಗ್ಗಳು ಅವರ ಆದಾಯವನ್ನು ನಿಖರವಾಗಿ ಪ್ರತಿಬಿಂಬಿಸುವುದಿಲ್ಲ. ತಮ್ಮ ಐಟಿ ತೆರಿಗೆಯನ್ನು ಮೂಲದಲ್ಲಿ ಕಡಿತಗೊಳಿಸಿರುವುದು ಸೂಕ್ತವಲ್ಲ ಎಂದು ತಿಳಿಸಿದೆ.

ಅದೇ ರೀತಿ ಕಂಟೆಂಟ್ ಕ್ರಿಯೇಟರ್ಗಳು ಪಾವತಿಸಿದ ಪ್ರಚಾರ ಸಾಮಗ್ರಿಗಳ ಬಗ್ಗೆಯೂ ಅನುಮಾನವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಯೂಟ್ಯೂಬರ್ಗಳು ಬಹಿರಂಗಪಡಿಸದ ಹೂಡಿಕೆಗಳನ್ನು ಮಾಡಿದ್ದಾರೆ. ಅದನ್ನು ಅವರ ತೆರಿಗೆ ಘೋಷಣೆಗಳಲ್ಲಿ ಸೇರಿಸಲಾಗಿಲ್ಲ ಎಂದು ಐಟಿ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಈ ಸಂಬಂಧಿತ ಯೂಟ್ಯೂಬರ್ಗಳು ಗಳಿಸಿದ ಆದಾಯಕ್ಕೆ ಸಂಬಂಧಿಸಿದ ಬ್ಯಾಂಕ್ ಸ್ಟೇಟ್ಮೆಂಟ್ಗಳು ಮತ್ತು ಇತರ ವಹಿವಾಟಿನ ವಿವರಗಳನ್ನು ಐಟಿ ತಂಡವು ಪರಿಶೀಲಿಸುತ್ತಿದೆ. ದಾಳಿ ಆರಂಭಿಸುವ ಮುನ್ನ ಐಟಿ ಇಲಾಖೆ ಪ್ರಾಥಮಿಕ ವಿಚಾರಣೆ ನಡೆಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!