ದಿಗಂತ ವರದಿ ಶಿರಸಿ :
ಮತದಾನಕ್ಕೆ ಕೆಲವೇ ದಿನ ಉಳಿದಿರುವ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಶುಕ್ರವಾರ ಬೆಳ್ಳಂ ಬೆಳಿಗ್ಗೆ ಐಟಿ ದಾಳಿ ನಡೆದಿದೆ.
ಎಷ್ಟು ಕಡೆ ದಾಳಿ?
ಒಟ್ಟು ಆರು ಕಡೆ ದಾಳಿ ನಡೆದಿದ್ದು,ಕಾಂಗ್ರೆಸ್ ಮುಖಂಡರು ಹಾಗೂ ಉದ್ಯಮಿಗಳಾದ ದೀಪಕ್ ದೊಡ್ಡರು, ಶಿವರಾಮ ಹೆಗಡೆ, ಅನಿಲ್ ಮುಷ್ಟಗಿ ಸೇರಿದಂತೆ ಒಟ್ಟು 6 ಜನರ ಮೇಲೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ.
ಹುಬ್ಬಳ್ಳಿಯಿಂದ ಮೂರು ಕಾರುಗಳಲ್ಲಿ ಬಂದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದ್ದು, ಸುಮಾರು 10 ಜನ ಅಧಿಕಾರಿಗಳಿದ್ದಾರೆ ಎನ್ನಲಾಗಿದೆ. ದೀಪಕ ಹೆಗಡೆ ಮನೆಯಲ್ಲಿ ಅವರ ಜೊತೆಗೆ ಸ್ನೇಹಿತ ಶಿವರಾಮ ಹೆಗಡೆ ಅವರನ್ನೂ ಸಹ ಕರೆದುಕೊಂಡು ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇಬ್ಬರೂ ಬ್ಯುಸಿನೆಸ್ ಪಾರ್ಟನರ್ಸ ಆಗಿದ್ದು, ಚುನಾವಣೆ ಕಾರಣಕ್ಕೆ ದಾಳಿಯೋ ? ಅಥವಾ ಬ್ಯುಸಿನೆಸ್ ವಿಷಯವಾಗಿ ದಾಳಿ ಆಗಿದೆಯೋ ಎಂಬುದು ತಿಳಿದು ಬರಬೇಕಿದೆ.
ಐಟಿ ದಾಳಿಯ ಹಿನ್ನಲೆಯಲ್ಲಿ ಮನೆಗೆ ಪೊಲೀಸರನ್ನು ನೇಮಕ ಮಾಡಲಾಗಿದೆ. ಕಾರವಾರ, ಮಂಗಳೂರು, ಹುಬ್ಬಳ್ಳಿಯ ಬಾಡಿಗೆ ಕಾರಿನಲ್ಲಿ ಅಧಿಕಾರಿಗಳು ಬಂದಿದ್ದಾರೆ. ಬೆಳಿಗ್ಗೆ 7 ಗಂಟೆಗೆ ದಾಳಿಯಾಗಿದ್ದು, ಮನೆ ಸಮೀಪಕ್ಕೆ ತೆರಳಲು ಸಾರ್ವಜನಿಕರಿಗೆ ಅವಕಾಶ ನಿರಾಕರಿಸಲಾಗಿದೆ.