ಕಾರು ಬಿಟ್ಟು ನಮ್ಮ ಮೆಟ್ರೋದಲ್ಲಿ ಪ್ರಯಾಣಸಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಮೆಟ್ರೋದಲ್ಲಿಂದು ಐಟಿ ಮತ್ತು ಬಿಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಯಾಣ ಮಾಡುವ ಮೂಲಕ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು.

ನಾಸ್ಕಾಮ್ ಮತ್ತು ಇಂಜಿನಿಯರಿಂಗ್ ಶೃಂಗಸಭೆ 2024ರಲ್ಲಿ ಭಾಗವಹಿಸಲು ಸಚಿವರು ವಿಧಾನಸೌಧ ಮೆಟ್ರೋ ನಿಲ್ದಾಣದಿಂದ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಿದರು.

40 ನಿಮಿಷಗಳ ಮೆಟ್ರೋ ಪ್ರಯಾಣದಲ್ಲಿ ಅವರು ಸಹ ಪ್ರಯಾಣಿಕರೊಂದಿಗೆ ಸಂವಾದ ನಡೆಸಿ ನಗರದಲ್ಲಿ ಪ್ರಯಾಣಿಕರ ದೈನಂದಿನ ಸಾರ್ವಜನಿಕ ಸಾರಿಗೆ ಅನುಭವಗಳ ಬಗ್ಗೆ ಮಾಹಿತಿ ಪಡೆದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

  1. ಗ್ರಾಮ ಪಂಚಾಯತ್ ನೌಕರರ ಸಮಸ್ಯೆ ಬಗ್ಗೆನೂ ಸ್ವಲ್ಪ ಚಿಂತನೆ ಮಾಡಿ ಸರ್ ಎಲ್ಲಾ ಬಡ ನೌಕರರು ಮತ್ತು ಅವರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ ಮತ್ತು ವಿವಿಧ ಇಲಾಖೆ ಕೆಲಸಗಳನ್ನು ಪಂಚಾಯತಕ್ಕೆ ನೀಡಿದೀರಾ ಇದರಿಂದ ಕೆಲಸ ಹೆಚ್ಚಾಯ್ತು ಆದ್ರೆ ಕೆಲಸ ಮಾಡೋ ನೌಕರರು ಇದ್ದವರಷ್ಟೇ ಇದರಿಂದ ಪಂಚಾಯತ್ ನೌಕರರಿಗೆ ಕೆಲಸದ ಒತ್ತಡವು ಹೆಚ್ಚಾಗಿ ಪಂಚಾಯತದಲ್ಲಿನ ಜೀತದ ಆಳುಗಳು ಆಗಿದ್ದಾರೆ ದಯವಿಟ್ಟು ಇನ್ಮೆಲಾದ್ರು ಗ್ರಾಮ ಪಂಚಾಯತ್ ನೌಕರರಿಗೆ ಕೆಲಸಾ ಕೊಡೋದರ ಜೊತೆಗೆ ಅವರನ್ನ ಸಿ ಮತ್ತು ಡಿ ದರ್ಜೆಯ ಸರಕಾರಿ ನೌಕರರನ್ನಾಗಿ ಮಾಡಿ ಅವರ ಕುಟುಂಬಕ್ಕೂ ಅನುಕೂಲ ಮಾಡಿ ಸಾಹೇಬರೇ…

LEAVE A REPLY

Please enter your comment!
Please enter your name here

error: Content is protected !!