ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಭು ಶ್ರೀರಾಮನ ಆದರ್ಶ ಧರ್ಮಕ್ಕೆ ಸೀಮಿತ ವಸ್ತುವಲ್ಲ ಎಂಬುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ.
ಅಯೋಧ್ಯಾ ನಗರಿಯಲ್ಲಿ ನಡೆಯುವ ರಾಮಲಲಾ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಳ್ಳಲು ಮುಂಬೈನ ಮುಸ್ಲಿಮ್ ಸಮುದಾಯದ ಯುವತಿಯೊಬ್ಬರು ಆಗಮಿಸುತ್ತಿದ್ದಾರೆ. ಅದೂ ಕೂಡಾ ಬರೋಬ್ಬರಿ 1425 ಕಿಲೋ ಮೀಟರ್ ಪಾದಯಾತ್ರೆಯಲ್ಲಿ!
ದಿನಕ್ಕೆ ಮೂವತ್ತು ಕಿಲೋ ಮೀಟರ್‌ನಷ್ಟು ದೂರ ನಡಿಗೆಯಲ್ಲಿ ಸಾಗುತ್ತಿರುವ ಶಬನಮ್ ಸಧ್ಯ ಮಧ್ಯಪ್ರದೇಶದ ಸಿಂಧವಾವನ್ನು ತಲುಪಿದ್ದಾರೆ. ಆಕೆಗೆ ಪಾದಯಾತ್ರೆಯುದ್ದಕ್ಕೂ ಪೊಲೀಸರು ಸೂಕ್ತ ಭದ್ರತೆ ಒದಗಿಸುತ್ತಿದ್ದಾರೆ. ಜೊತೆಗೆ ಊಟ ಮತ್ತು ವಸತಿ ವ್ಯವಸ್ಥೆ ಬಗ್ಗೆಯೂ ಕಾಳಜಿ ವಹಿಸಲಾಗುತ್ತಿದೆ.
ಶ್ರೀರಾಮನ ಆದರ್ಶಗಳು ನಿರ್ದಿಷ್ಟ ಧರ್ಮ, ಪ್ರದೇಶಕ್ಕೆ ಸೀಮಿತವಲ್ಲ. ಇದು ಗಡಿಗಳನ್ನು ಮೀರಿದೆ. ರಾಮಲಲಾ ಪ್ರಾಣಪ್ರತಿಷ್ಠೆ ಕ್ಷಣವು ಇಡೀ ಜಗತ್ತನ್ನು ಒಳಗೊಳ್ಳುವ ಶುಭ ಘಳಿಗೆಯಾಗಿದೆ ಎಂದು ನಾನು ನಂಬುತ್ತೇನೆ ಎಂದಿದ್ದಾರೆ ಶಬನಮ್.