ದೇಶಕ್ಕೆ ಮುಸ್ಲಿಂ ಪ್ರಧಾನಿ ಆಗಬೇಕು ಅನ್ನುವುದು ಹುಚ್ಚು ಕಲ್ಪನೆ: ಸಚಿವ ಬಿ.ಸಿ.ಪಾಟೀಲ್

ಹೊಸದಿಗಂತ ವರದಿಗದಗ :

ದೇಶಕ್ಕೆ ಮುಸ್ಲಿಂ ಪ್ರಧಾನಿ ಎನ್ನುವ ವಿಷಯ ಕಲ್ಪನೆಯೇ ಹೊರತು ಸಹಕಾರ ಸಿಗುವದಕ್ಕೆ ಸಾಧ್ಯವಿಲ್ಲ, ಅಲ್ಲದೆ, ಇದು ಭಾರತ ದೇಶ. ಇಲ್ಲಿ ಅದು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಖಡಕ್ಕಾಗಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭಾರತಕ್ಕೆ ಮುಸ್ಲಿಂ ಪ್ರಧಾನಿ ಆಗಬೇಕು ಎನ್ನುವ ವಿಷಯ ಚರ್ಚೆ ಕುರಿತು ಪ್ರತಿಕ್ರಿಯಸಿದ ಅವರು ಈ ಬಗ್ಗೆ ಟ್ವಿಟರ್ ಆಭಿಯಾನ ಶುರುವಾಗಿದೆ. ಕಾಂಗ್ರೆಸ್ ಘಟಾನುಘಟಿ ನಾಯಕರು ಮುಸ್ಲಿಂ ಪ್ರಧಾನಿ ಆಗಬೇಕು ಅನ್ನುವದಕ್ಕೆ ಧ್ವನಿ ಗೂಡಿಸಿದ್ದಾರೆ. ಆದರೆ, ಮುಸ್ಲಿಂ ಪ್ರಧಾನಿ ಎನ್ನುವುದು ಹುಚ್ಚು ಕಲ್ಪನೆ ಎಂದರು.

ಸಿದ್ದರಾಮಯ್ಯ ವಿರುದ್ಧದ ಕಿಕ್‌ಬ್ಯಾಕ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ ಈ ಹಿಂದೆ ಅವರ ಮೇಲಿನ ಆರೋಪಗಳಿಂದ ರಕ್ಷಣೆ ಪಡೆಯಲು ಸಿದ್ದರಾಮಯ್ಯ ಅವರು ಮುಂದಾಗಿದ್ದರು. ಲೋಕಾಯುಕ್ತ ಇಲಾಖೆ ಮುಚ್ಚಿ ಎಸಿಬಿ ರಚನೆ ಮಾಡಿದ್ದೇ ಅದಕ್ಕೆ ಸಾಕ್ಷಿಯಾಗಿದೆ, ಸ್ಟೀಲ್ ಬ್ರಿಜ್ಡ್ ಯಾಕೆ ವಾಪಾಸ್ ಹೋಯ್ತು. ಆರೋಪ ಬಂದಿದ್ದಕ್ಕೆ ವಾಪಾಸ್ ಹೋಯ್ತು ಎಂದು ಹೇಳಿದರು.

ಸ್ವಪಕ್ಷದಿಂದ ಕಿರುಕುಳ ಎಂಬ ಜನಾರ್ದನ ರೆಡ್ಡಿ ಅವರ ಹೇಳಿಕೆಗೆ ಉತ್ತರಿಸಿದ ಅವರು ಇದು ಎಲ್ಲ ಸುಳ್ಳು, ಯಾರೂ ಕಿರುಕುಳ ಕೊಡಲ್ಲ, ಜನಾರ್ದನ್ ರೆಡ್ಡಿ ಆರಾಮಾಗಿದ್ದಾರೆ. ಪಕ್ಷದಲ್ಲಿ ಆರೀತಿ ನಡೆದಿಲ್ಲ ಎಂದರು.

ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ. ಈಗ ಸುಮ್ಮನೆ ಆಯೋಗ ರಚನೆ ಮಾಡಿದ್ದೆವೆ ಎಂದರೆ ಹೇಗೆ ಆಗಲೇ ಜಾರಿ ಮಾಡಬಹುದಿತ್ತಲ್ಲ ಯಾಕೆ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ ನೀಡಿದರು. ಅವರು ಸುಮ್ಮನೆ ಜನರ ಕಣ್ಣು ಒರೆಸೋದಕ್ಕೆ ಆಯೋಗ ರಚನೆ ಮಾಡ್ಕೊಂಡು ಬಂದಿದ್ದರು. ಆದರೆ, ಸಾಮಾಜಿಕ ನ್ಯಾಯ ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಯಾರು ಮೀಸಲಾತಿ ಹೆಚ್ಚು ಮಾಡಿದ್ದಾರೆ ಆ ಜನಾಂಗಕ್ಕೆ ಗೊತ್ತಿದೆ ಎಂದು ಹೇಳಿದ ಅವರು ಏಕ ರೂಪ ನಾಗರಿಕ ಸಂಹಿತೆ ಜಾರಿ ವಿಚಾರಕ್ಕೆ ಸಂಹಿತೆ ಅವಶ್ಯಕತೆ ಇದೆ. ಮುಂದಿನ ದಿನದಲ್ಲಿ ಎಲ್ಲೆಡೆ ಜಾರಿಗೆ ಬರುತ್ತೆ ಎಂದು ಸಚಿವ ಬಿ.ಸಿ.ಪಾಟೀಲ ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!