ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೀ ಅವರ ಪಕ್ಷದವರನ್ನೇ ಇಟ್ಕೊಂಡು ಸಂಸತ್ ನಡೆಸೋದು ನಾಚಿಕೆಗೇಡು, ಈ ರೀತಿ 141 ಸಂಸದರನ್ನು ಸಂಸತ್‌ನಿಂದ ಹೊರಹಾಕಿರೋದು ಸರ್ವಾಧಿಕಾರಕ್ಕೂ ಮೀರಿದ ಧೋರಣೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಜಾಪ್ರಭುತ್ವದ ಮೂಲವೇ ಚರ್ಚೆ, ಚರ್ಚೆ ಮಾಡೋದಕ್ಕೆ ಅವಕಾಶ ಇಲ್ಲವಾದ್ರೆ ಹೇಗೆ? ಒಳ್ಳೆಯ ಸರ್ಕಾರ ರಚನೆಯಾಗೋದು ಒಂದು ಗಟ್ಟಿಯಾದ ವಿಪಕ್ಷ ಇದ್ರೆ ಮಾತ್ರ. ಸರ್ಕಾರದ ತಪ್ಪುಗಳನ್ನು ಹೇಳೇ ಹೇಳ್ತಿವಿ, ಅದನ್ನು ಕೇಳಿಸಿಕೊಳ್ಳೋ ಆರೋಗ್ಯಕರ ವಾತಾವರಣ ಇರಬೇಕು ಎಂದಿದ್ದಾರೆ.