ಹೋಳಿ ಹಬ್ಬದಂದು ಶಿವಲಿಂಗದ ಮೇಲೆ ಈ ವಸ್ತುಗಳನ್ನು ಅರ್ಪಿಸುವುದು ಶ್ರೇಷ್ಠವಂತೆ!

ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ, ಹೋಳಿ ಹಬ್ಬದ ದಿನದಂದು ಶಿವನನ್ನು ಪೂಜಿಸುವುದು ತುಂಬಾ ಒಳ್ಳೆಯದು. ನಂಬಿಕೆಗಳ ಪ್ರಕಾರ, ಹೋಳಿ ಹಬ್ಬದ ದಿನದಂದು ಶಿವಲಿಂಗಕ್ಕೆ ಕೆಲವು ವಿಶೇಷ ವಸ್ತುಗಳನ್ನು ಅರ್ಪಿಸುವುದರಿಂದ, ಶಿವನು ಸಂತೋಷಗೊಂಡು ತನ್ನ ವಿಶೇಷ ಆಶೀರ್ವಾದಗಳನ್ನು ನೀಡುತ್ತಾನೆ. ಹಾಗಾದರೆ ಹೋಳಿ ಹಬ್ಬದ ದಿನದಂದು ಶಿವನಿಗೆ ಯಾವ ವಸ್ತುಗಳನ್ನು ಅರ್ಪಿಸಬೇಕು ಎಮಬುದನ್ನು ಇಲ್ಲಿ ತಿಳಿದುಕೊಳ್ಳಿ.

ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷದ ಫಾಲ್ಗುಣ ಮಾಸದ ಹುಣ್ಣಿಮೆ ಪ್ರಾರಂಭವಾಗಿದೆ. ಫಾಲ್ಗುಣ ಪೂರ್ಣಿಮೆ ನಿನ್ನೆ ಬೆಳಿಗ್ಗೆ 10:35 ಕ್ಕೆ ಪ್ರಾರಂಭವಾಗಿದೆ. ಇಂದು ಅಂದರೆ ಮಾರ್ಚ್ 14 ರಂದು ಮಧ್ಯಾಹ್ನ 12:23 ಕ್ಕೆ ಕೊನೆಗೊಳ್ಳುತ್ತದೆ.

ಹೋಳಿ ಹಬ್ಬದ ದಿನದಂದು, ಹೋಳಿಕಾ ದಹನದಿಂದ ತಂದ ಚಿತಾಭಸ್ಮವನ್ನು ಶಿವಲಿಂಗದ ಮೇಲೆ ಅರ್ಪಿಸಬೇಕು. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಹೋಳಿ ಹಬ್ಬದ ದಿನದಂದು ಶಿವಲಿಂಗದ ಮೇಲೆ ಹೋಳಿಕಾ ದಹನದ ಚಿತಾಭಸ್ಮವನ್ನು ಅರ್ಪಿಸುವವರ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಳಿಯುತ್ತದೆ. ನಕಾರಾತ್ಮಕತೆಯು ಮನೆಯಿಂದ ದೂರವಾಗುತ್ತದೆ. ಅಲ್ಲದೆ ಕುಟುಂಬದ ಸದಸ್ಯರು ರೋಗ ಮುಕ್ತರಾಗುತ್ತಾರೆ.

ಹೋಳಿ ಹಬ್ಬದ ದಿನದಂದು ಶಿವಲಿಂಗದ ಮೇಲೆ ನೀಲಿ ಮತ್ತು ಕೆಂಪು ಬಣ್ಣದ ಗುಲಾಲ್ ಅನ್ನು ಸಹ ಅರ್ಪಿಸಬೇಕು. ಹೋಳಿ ಹಬ್ಬವನ್ನು ಹುಣ್ಣಿಮೆಯಂದು ಆಚರಿಸಲಾಗುತ್ತದೆ, ಆದ್ದರಿಂದ ಈ ದಿನದಂದು ಶಿವಲಿಂಗಕ್ಕೆ ಗುಲಾಲ್ ಅರ್ಪಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!