ನಮ್ಮ ಕೈಯಿಂದ ವಸ್ತುಗಳು ಜಾರಿ ಕೆಳಗೆ ಬೀಳೋದು ತುಂಬಾ ಸಾಮಾನ್ಯ ವಿಷಯ. ಆದರೆ ಅದೇ ಪದೆ ಪದೆ ಆಗುತ್ತಿದೆ ಎಂದರೆ ಇಡೀ ವಿಶ್ವವೇ ನಮಗೇನೋ ಸೂಚನೆ ನೀಡುತ್ತಿದೆ ಎಂದು ತಿಳಿಯಲಾಗುತ್ತದೆ. ಯಾವ ವಸ್ತುಗಳು ಬಿದ್ದರೆ ಒಳ್ಳೆಯದಲ್ಲ..ನೋಡಿ..
ಶಂಖ
ಶಾಸ್ತ್ರದ ಪ್ರಕಾರ ಶಂಖ ಲಕ್ಷ್ಮೀದೇವಿಯ ಸಹೋದರ. ಪೂಜೆಯ ವೇಳೆ ಯಾವಾಗಲೂ ಇದು ಬೀಳುತ್ತಿದೆ ಎಂದರೆ ಜಾಗೃತರಾಗಿರಿ.
ಅಕ್ಕಿ
ಅನ್ನ ಮಾಡುವಾಗ, ಅಕ್ಕಿ ನೆನೆಸುವಾಗ, ಪೂಜೆಗೆ ಇಡುವಾಗ ಪದೇ ಪದೆ ಅಕ್ಕಿ ನೆಲಕ್ಕೆ ಬಿದ್ದರೆ ಲಕ್ಷ್ಮೀದೇವಿ ನಿಮ್ಮ ಮೇಲೆ ಕೋಪಗೊಂಡಿರಬಹುದು ಎಂದರ್ಥ. ಇಂಥವರು ಎಷ್ಟು ಕಷ್ಟಪಟ್ಟರು ಹಣ ಕೈಕೂಡುವುದಿಲ್ಲ.
ಮೊಸರು
ಶುಭಸಂದರ್ಭಗಳಿಗೆ ತೆರಳುವಾಗ ಮೊಸರು ಸಕ್ಕರೆ ನೀಡಲಾಗುತ್ತದೆ. ಮೊಸರು ಕೈ ಜಾರಿ ಬಿದ್ದರೆ ಹೋಗುವ ಕೆಲಸ ಫಲ ನೀಡುವುದಿಲ್ಲ ಎನ್ನಲಾಗುತ್ತದೆ.
ಅರಿಶಿಣ,ಕುಂಕುಮ
ಅರಿಶಿಣ ಕುಂಕುಮ ಕೈ ಜಾರಿ ಬೀಳುತ್ತಿದ್ದರೆ, ಪತಿಯ ಆರೋಗ್ಯದಲ್ಲಿ ತೊಂದರೆಯಾಗುತ್ತದೆ ಎನ್ನಲಾಗುತ್ತದೆ.
ಹಾಲು
ಪ್ರೀ ಬಾರಿ ಹಾಲು ಒಲೆಯ ಮೇಲಿಟ್ಟು ಮರೆತುಬಿಡುವುದು, ಹಾಲು ಉಕ್ಕಿ ನೆಲಕ್ಕೆ ಬೀಳುತ್ತಿದ್ದರೆ ನೀವು ತಪ್ಪು ಹೆಜ್ಜೆ ಇಡುತ್ತಿದ್ದೀರಿ ಎಂದರ್ಥ.
ಉಪ್ಪು
ಊಟಕ್ಕೆ ಬಡಿಸುವಾಗ, ಅಡುಗೆ ಮಾಡುವಾಗ ಉಪ್ಪು ಬಿದ್ದರೆ ಶೀಘ್ರವೇ ಆರ್ಥಿಕ ಸಮಸ್ಯೆ ಎದುರಾಗಲಿದೆ ಎಂದರ್ಥ.
ಈ ಎಲ್ಲವನ್ನೂ ಎಲ್ಲರೂ ನಂಬುವುದಿಲ್ಲ. ಕೈ ನಡುಗುವ ಆರೋಗ್ಯ ಸಮಸ್ಯೆ ಇರುವವರು ಏನನ್ನೇ ಮುಟ್ಟಿದರೂ ಅದು ಪದೇ ಪದೆ ಬೀಳುತ್ತಲೇ ಇರುತ್ತದೆ. ಹಾಗಂತ ಅವರಿಗೆ ಎಲ್ಲ ಸಮಸ್ಯೆ ಇದು ಎಂದು ಹೇಳಲಾಗುವುದಿಲ್ಲ. ಕೆಲವರು ಬೇರೆ ಕೆಲಸದಲ್ಲಿ ನಿರತರಾಗಿದ್ದಾಗ ಹಾಲು ಉಕ್ಕಬಹುದು, ಕೈ ಜಾರಿ ಪದಾರ್ಥಗಳು ಬೀಳಬಹುದು. ಎಲ್ಲವೂ ನಿಮ್ಮ ನಂಬಿಕೆ, ಆಚರಣೆಗೆ ಬಿಟ್ಟಿದ್ದು.