Sunday ಈ ದೇಶದಲ್ಲಿ ಕಾರ್ ವಾಶ್ ಮಾಡೋಹಾಗಿಲ್ಲ! ಮಾಡಿದ್ರೆ 9 ಲಕ್ಷ ಫೈನ್ ಪಕ್ಕಾ

ಪ್ರಪಂಚದ ಪ್ರತಿಯೊಂದು ದೇಶದಲ್ಲೂ ತಮ್ಮದೇ ಆದ ವಿಶಿಷ್ಟ ಕಾನೂನುಗಳಿವೆ. ಕೆಲವೊಂದು ದೇಶಗಳಲ್ಲಿ ಆ ಕಾನೂನುಗಳು ಸರಳವಾಗಿದ್ದರೆ, ಇನ್ನೂ ಕೆಲವು ಕಡೆ ವಿಚಿತ್ರವೂ ಹೌದು. ಭಾರತದಲ್ಲಿ ಯಾವ ದಿನವಾದ್ರೂ ಕಾರು ತೊಳಿಬಹುದು. ಅದು ಸಾಮಾನ್ಯ ವಿಷಯ. ಆದರೆ ಸ್ವಿಟ್ಜರ್ಲೆಂಡ್ (Switzerland) ಎಂಬ ಸುಂದರ ಹಾಗೂ ಅತ್ಯಂತ ಅಭಿವೃದ್ಧಿ ಹೊಂದಿದ ದೇಶದಲ್ಲಿ ಒಂದು ವಿಚಿತ್ರ ನಿಯಮ ಜಾರಿಯಲ್ಲಿದೆ—ಅದು ಭಾನುವಾರದಂದು ಕಾರು ವಾಶ್ ಮಾಡುವುದು ನಿಷಿದ್ಧ!

ಹೌದು, ವಿಶ್ವದ ಅತ್ಯಂತ ಶಿಸ್ತಿನ ದೇಶಗಳಲ್ಲಿ ಒಂದಾದ ಸ್ವಿಟ್ಜರ್ಲೆಂಡ್‌ನಲ್ಲಿ ಭಾನುವಾರವು ಸಂಪೂರ್ಣ ವಿಶ್ರಾಂತಿಯ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ಸಾರ್ವಜನಿಕವಾಗಿ ಯಾವುದೇ ಶಬ್ದ, ಗದ್ದಲ, ಗಲಾಟೆ ಅಥವಾ ಕೆಲಸ ಮಾಡಿದರೆ, ಅದು ಕಾನೂನು ಉಲ್ಲಂಘನೆ. ಈ ನಿಯಮವನ್ನು ಉಲ್ಲಂಘಿಸಿದರೆ, 10,000 ಯುರೋ (ಸುಮಾರು 9 ಲಕ್ಷ)ದವರೆಗೆ ಭಾರಿ ದಂಡ ವಿಧಿಸಲಾಗುತ್ತದೆ.

ಈ ಕಾನೂನು ಹಲವು ವರ್ಷಗಳಿಂದ ಜಾರಿಯಲ್ಲಿದ್ದು, ದೇಶದ ಎಲ್ಲಾ ನಿವಾಸಿಗಳು ಮತ್ತು ಪ್ರವಾಸಿಗರು ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಸ್ವಯಂ ಚಾಲಿತ ಕಾರ್ ವಾಶ್ ಸೌಲಭ್ಯಗಳು ಕೆಲವಡೆ ಮಾತ್ರ ಲಭ್ಯವಿದ್ದು, ಅವುಗಳಲ್ಲೂ ನೀರು ಬಳಸುವ ಪ್ರಮಾಣಕ್ಕೆ ನಿಯಂತ್ರಣವಿದೆ.

ಈ ಕಾನೂನು ಸ್ವಿಟ್ಜರ್ಲೆಂಡ್‌ನ ಶಿಸ್ತು, ಶಾಂತಿ ಮತ್ತು ಪರಿಸರದ ಮೇಲೆ ಇರುವ ಗಮನವನ್ನು ತೋರಿಸುತ್ತದೆ. ಇಂತಹ ವಿಶೇಷ ಕಾನೂನುಗಳು ಆ ದೇಶದ ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಜ್ಞೆಯ ಪ್ರತಿರೂಪವಾಗಿವೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!