ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣವನ್ನು ತನಿಖೆ ನಡೆಸಲು ಈಗಾಗಲೇ ಸರ್ಕಾರ, ತನಿಖಾ ಆಯೋಗವನ್ನು ನೇಮಿಸಿದೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ, ಸತ್ಯಾಂಶ ತಿಳಿಯುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಹೇಳಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸರ್ಕಾರ ಹೊಣೆಯಲ್ಲ. ದುರಂತರದ ಬಗ್ಗೆ ಪ್ರತಿಯೊಬ್ಬರಿಗೂ ಬೇಸರವಿದೆ. ಹಾಗಾಗಿಯೇ ಲೋಪ ಪತ್ತೆ ಹಚ್ಚಲು ತನಿಖಾ ಆಯೋಗವನ್ನು ರಚಿಸಲಾಗಿದೆ. ಈ ರೀತಿ ರಾಜ್ಯದ ಹಲವೆಡೆಗಳಲ್ಲಿ ಹಲವಾರು ಪ್ರಕರಣಗಳಾಗಿವೆ. ಇಂತಹ ದುರ್ಘಟನೆಗಳಲ್ಲಿ ರಾಜಕೀಯ ಬೆರೆಸುವುದು ಸೂಕ್ತವಲ್ಲ. ಗುಜರಾತ್ ನ ಅಹಮಾದಾಬಾದ್ ನಲ್ಲಿ ನಡೆದ ವಿಮಾನ ದುರಂತದ ವಿಷಯದಲ್ಲಿಯೂ ತಮ್ಮದೂ ಇದೇ ಅಭಿಪ್ರಾಯವಾಗಿದೆ ಎಂದರು.